ವೆಸ್ಟ್‌ಇಂಡೀಸ್ ವಿರುದ್ಧ ಭಾರತ ಟಿ-20 ಪಂದ್ಯಗಳ ಸ್ಥಳ ಬದಲಾವಣೆ

Promotion

ಬೆಂಗಳೂರು, ನವೆಂಬರ್ 23, 2019 (www.justkannada.in): ವೆಸ್ಟ್‌ಇಂಡೀಸ್ ವಿರುದ್ಧ ಭಾರತ ತಂಡ ಮುಂಬೈ ಹಾಗೂ ಹೈದರಾಬಾದ್‌ನಲ್ಲಿ ಆಡಲಿರುವ ಪಂದ್ಯಗಳ ದಿನಾಂಕವನ್ನು ಬಿಸಿಸಿಐ ಅದಲು-ಬದಲು ಮಾಡಿದೆ.

ಮುಂಬೈ ನಗರ ಮೊದಲ ಪಂದ್ಯದ ಬದಲಿಗೆ ಡಿ.11ರಂದು ನಡೆಯಲಿರುವ ಮೂರನೇ ಹಾಗೂ ಕೊನೆಯ ಪಂದ್ಯದ ಆತಿಥ್ಯವನ್ನು ವಹಿಸಿಕೊಳ್ಳಲಿದ್ದು, ಡಿ.6ರಂದು ಮೊದಲ ಪಂದ್ಯದ ಆತಿಥ್ಯದ ಅವಕಾಶ ಹೈದರಾಬಾದ್ ಸಿಕ್ಕಿದೆ.

ಎಂಸಿಎ 2017ರ ಡಿಸೆಂಬರ್‌ನಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಬಾರಿ ಅಂತರ್‌ರಾಷ್ಟ್ರೀಯ ಪಂದ್ಯದ ಆತಿಥ್ಯವಹಿಸಿಕೊಂಡಿತ್ತು. ಕಳೆದ ವರ್ಷ ಎಂಸಿಎಯಲ್ಲಿನ ಆಡಳಿತಾತ್ಮಕ ಕಾರಣದಿಂದ ಬಿಸಿಸಿಐ ವೆಸ್ಟ್ ಇಂಡೀಸ್ ವಿರುದ್ಧ ವಾಂಖಡೆ ಸ್ಟೇಡಿಯಂನಲ್ಲಿ ನಡೆಯಬೇಕಾಗಿದ್ದ ಪಂದ್ಯವನ್ನು ಮುಂಬೈನ ಮತ್ತೊಂದು ಸ್ಟೇಡಿಯಂ ಬ್ರೆಬೋರ್ನ್‌ಗೆ ಸ್ಥಳಾಂತರಗೊಳಿಸಿತ್ತು.