ಅಪರೇಷನ್ ಕಮಲ ತಡೆಯಲು ಪ್ಲಾನ್: ನವದೆಹಲಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಜತೆ ಕಾಣಿಸಿಕೊಂಡ ಪಕ್ಷೇತರ ಅಭ್ಯರ್ಥಿ…

ನವದೆಹಲಿ,ಮೇ,25,2019(www.justkannada.in): ಲೋಕಸಭೆ ಚುನಾವಣೆ  ಫಲಿತಾಂಶ ಹೊರಬಿದ್ದ ಬೆನ್ನಲ್ಲೆ ರಾಜ್ಯ ಸಮ್ಮಿಶ್ರ ಸರ್ಕಾರದ ಅಳಿವು ಉಳಿವಿನ ಬಗ್ಗೆ ಚರ್ಚೆಯಾಗುತ್ತಿದೆ. ಈ ನಡುವೆ ಕೇಂದ್ರದಲ್ಲಿ ಎನ್ ಡಿಎಗೆ ಬಹುಮತ ಬಂದ ಹಿನ್ನೆಲೆ ರಾಜ್ಯದಲ್ಲೂ ಬಿಜೆಪಿ ಅಪರೇಷನ್ ಕಮಲದ ಮೂಲಕ ಅಧಿಕಾರಕ್ಕೇರಲು ಮುಂದಾಗುವ ಸಾಧ್ಯತೆ ಇದೆ.

ಅದ್ದರಿಂದ ಬಿಜೆಪಿಯ ಅಪರೇಷನ್ ಕಮಲ ತಡೆಯಲು ಮಾಜಿ ಸಿದ್ದರಾಮಯ್ಯ ಪ್ಲಾನ್ ರೂಪಿಸಿದ್ದು, ಹಾವೇರಿ ಜಿಲ್ಲೆಯ ರಾಣಿಬೆನ್ನೂರು  ಪಕ್ಷೇತರ ಶಾಸಕ ಆರ್.ಶಂಕರ್ ಅವರನ್ನ ನವದೆಹಲಿಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಪಕ್ಷೇತರ ಶಾಸಕ ಆರ್‌.ಶಂಕರ್‌ ಅವರು ಇಂದು ನವದೆಹಲಿಯಲ್ಲಿ ಸಿದ್ದರಾಮಯ್ಯ ಅವರೊಂದಿಗೆ  ಪ್ರತ್ಯಕ್ಷವಾಗಿದ್ದು, ಕಾಂಗ್ರೆಸ್ ಹೈಕಮಾಂಡ್‌ ನಾಯಕರನ್ನು ಭೇಟಿಯಾಗುವ ಸಾಧ್ಯತೆಗಳಿವೆ.

ಇನ್ನು ಆರ್. ಶಂಕರ್ ಅವರನ್ನ ಕಾಂಗ್ರೆಸ್ ಕೋಟಾದಡಿ ಸಚಿವ ಸ್ಥಾನ ನೀಡಲಾಗಿತ್ತು. ಬಳಿಕ ಸಚಿವ ಸ್ಥಾನದಿಂದ ತೆಗೆದು ಹಾಕಲಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಆರ್.ಶಂಕರ್  ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದು ಬಿಜೆಪಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದರು.

ನಂತರ ಬಿಜೆಪಿ ನಾಯಕರು ಪಕ್ಷೇತರ ಶಾಸಕರಿಬ್ಬರು ನಮ್ಮೊಂದಿಗೆ ಇದ್ದಾರೆ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಇದೀಗ ಬಿಜೆಪಿ ನಾಯಕರು ಹಾಕಿರುವ ಲೆಕ್ಕಾಚಾರಗಳು ತಲೆಕೆಳಗಾಗಿದ್ದು, ಪಕ್ಷೇತರ ಶಾಸಕ ಆರ್.ಶಂಕರ್  ಸಿದ್ದರಾಮಯ್ಯ ಜತೆ ನವದೆಹಲಿಗೆ ತೆರಳಿದ್ದಾರೆ. ಅಲ್ಲದೆ ತನ್ನ ಜತೆ ಇರುವಂತೆ ಸಿದ್ದರಾಮಯ್ಯ ಆರ್.ಶಂಕರ್ ಅವರಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

key words: Independent candidate who appeared with former CM Siddaramaiah in New Delhi.

#Independentcandidate  #Siddaramaiah #NewDelhi.