ಮೈಸೂರಿನಲ್ಲಿ ಕೊರೊನಾ ಆತಂಕದ ನಡುವೆಯೂ ಪರಿಸರ ಗಣಪತಿಗೆ ಹೆಚ್ಚಿದ ಬೇಡಿಕೆ

Promotion

ಮೈಸೂರು, ಆಗಸ್ಟ್ 16, 2020 (www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪರಿಸರ ಗಣಪತಿಗೆ ಒತ್ತು ನೀಡಲಾಗುತ್ತಿದೆ. ಕೊರೊನಾ ನಡುವೆಯೂ ಪರಿಸರ ಗಣಪತಿಗೆ ಬೇಡಿಕೆ ಹೆಚ್ಚಿದೆ.

ಸರ್ಕಾರದ ಮಾರ್ಗಸೂಚಿ ಅನ್ವಯ ಗಣಪತಿ ಹಬ್ಬಕ್ಕೆ ಸಿದ್ದತೆ ನಡೆಯುತ್ತಿದ್ದು, ಸಾರ್ವಜನಿಕವಾಗಿ ಗಣಪತಿ ಕೂರಿಸಲು ನಿರ್ಬಂಧ ಹೇರಿರುವ ಸರ್ಕಾರ ಹಿನ್ನೆಲೆಯಲ್ಲಿ ಮನೆಮನೆಗೆ ವಿಘ್ನ ವಿನಾಯಕ ಪ್ರತಿಷ್ಠಾಪಿಸಲು ಸಿದ್ದತೆ ನಡೆದಿದೆ.

ಒಂದು ಅಡಿ ಹಾಗೂ ಎರಡು ಅಡಿ ಗಣಪ ಮೂರ್ತಿಗೆ ಹೆಚ್ಚಿದ ಬೇಡಿಕೆ. ಬೃಹತ್‌ ಗಣಪತಿ ಮೂರ್ತಿ ತಯಾರಿಕೆ ಕೈಬಿಟ್ಟ ಶಿಲ್ಪಕಲಾವಿದರು. ಕೇವಲ ಸಾಂಪ್ರದಾಯಿಕ ಗಣಪತಿ ತಯಾರಿಕೆಗೆ ಹೆಚ್ಚು ಒತ್ತು ನೀಡಲಾಗಿದೆ.

ಪ್ರತಿ ವರ್ಷವೂ ವಿಶೇಷ ಥೀಮ್ ನಲ್ಲಿ ಸಿದ್ದಪಡಿಸುತ್ತಿದ್ದ ಗಣೇಶ ಮೂರ್ತಿ ತಯಾರಕ ರೇವಣ್ಣ. ಪ್ರಸ್ತುತ ಸನ್ನಿವೇಶ ಆದರಿಸಿ ಪ್ರತೀ ವರ್ಷ ಮೂರ್ತಿ ತಯಾರಿಸುತ್ತಿದ್ದ ರೇವಣ್ಣ ಅವರು ಈ ಬಾರಿ ಕೊರೊನಾ ಹಿನ್ನೆಲೆ ವಿಶೇಷ ಗಣಪತಿಗೆ ಬ್ರೇಕ್ ಹಾಕಿದ್ದಾರೆ.

ಮೈಸೂರಿನ ಕುಂಬಾರಗೇರಿ ಅಶೋಕ ರಸ್ತೆಯ ನಿವಾಸಿ ರೇವಣ್ಣ ಈ ಹಿಂದೆ ನರೇಂದ್ರ ಮೋದಿ, ದಿ.ಸುಷ್ಮಸ್ವರಾಜ್, ಅನಂತ್ ಕುಮಾರ್ ಹಾಗೂ ಕೊಡಗಿನ ಪ್ರವಾಹದ ಥೀಮ್ ನಲ್ಲಿ ಮೂರ್ತಿ ತಯಾರಿಸಿದ್ದರು..