ನ್ಯಾಷನಲ್ ಕಾಲೇಜಿನಲ್ಲಿ ನೂತನ ಕಂಪ್ಯೂಟರ್ ಪ್ರಯೋಗಾಲಯ ಉದ್ಘಾಟನೆ.

kannada t-shirts

ಬೆಂಗಳೂರು, ಅಕ್ಟೊಬರ್ ,10,2022(www.justkannada.in):  ಹೈದರಾಬಾದ್ ನ LIC ಗೋಲ್ಡನ್ ಜ್ಯೂಬ್ಲಿ ಫೌಂಡೇಶನ್ ವತಿಯಿಂದ ನ್ಯಾಷನಲ್ ಕಾಲೇಜು ಜಯನಗರದಲ್ಲಿ ನಿರ್ಮಾಣವಾದ ನೂತನ ಕಂಪ್ಯೂಟರ್ ಪ್ರಯೋಗಾಲಯವನ್ನು, ಸಂಸ್ಥೆಯ ಸೌತ್ ಸೆಂಟ್ರಲ್ ಜೋನ್ ಮ್ಯಾನೇಜರ್ ಎಂ. ಜಗನ್ನಾಥ್ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ನ್ಯಾಷನಲ್ ಎಜುಕೇಶನ್ ಸೊಸೈಟಿ ಅಧ್ಯಕ್ಷರಾದ ಡಾ. ಎ. ಹೆಚ್. ರಾಮರಾವ್ “ವಿವಿಧ ನಾವೀನ್ಯತೆಯಿಂದ ನಿರ್ಮಾಣಗೊಂಡಿರುವ ‘ಕಂಪ್ಯೂಟಿಂಗ್ ಅಂಡ್ ಕೋಲಾಬೋರೇಷನ್ ಲ್ಯಾಬೊರೇಟರಿ’ 50ಕ್ಕೂ ಹೆಚ್ಚು ಟಾಪ್ ಎಂಡ್ ಕಂಪ್ಯೂಟರ್ಸ್, ವಿಡಿಯೋ ಕಾನ್ಫರೆನ್ಸಿಂಗ್ ರೂಂ ಮತ್ತು ಟೆಲಿಫೋನ್ ಬೂತ್ ಗಳನ್ನು ಒಳಗೊಂಡಿದೆ. ಅತ್ಯಂತ ವೇಗದ ಇಂಟರ್ನೆಟ್ ಸೌಲಭ್ಯವನ್ನು ಹೊಂದಿದ್ದು ಏಕಕಾಲದಲ್ಲೇ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು  ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ” ಎಂದರು.

ಕಾರ್ಯಕ್ರಮದಲ್ಲಿ ನ್ಯಾಷನಲ್ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿಗಳಾದ ಪ್ರೊ. ಎಸ್. ಎನ್. ನಾಗರಾಜರೆಡ್ಡಿ, ಡಾ.ಪಿ. ಸದಾನಂದಮಯ್ಯ, ಪ್ರಾಂಶುಪಾಲರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Key words:  Inauguration- new computer -laboratory – National College.

website developers in mysore