ಮಾರ್ಚ್ 2 ಅಥವಾ 3ನೇ ವಾರ ಎಕ್ಸ್‌ ಪ್ರೆಸ್‌ ಹೈವೇ ಉದ್ಘಾಟನೆ: ಟೋಲ್ ಬಗ್ಗೆ ಇನ್ನೂ ಫೈನಲ್ ಆಗಿಲ್ಲ- ಸಂಸದ ಪ್ರತಾಪ್ ಸಿಂಹ

Promotion

ಮೈಸೂರು,ಫೆಬ್ರವರಿ,13,2023(www.justkannada.in): ಮಾರ್ಚ್ 2 ಅಥವಾ 3ನೇ ವಾರ  ಮೈಸೂರು-ಬೆಂಗಳೂರು ಎಕ್ಸ್‌ ಪ್ರೆಸ್‌ ಹೈವೇಯನ್ನ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಸಂಸದ ಪ್ರತಾಪ್ ಸಿಂಹ,  ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೇಗೆ 250 ರೂಪಾಯಿ ಟೋಲ್ ನಿಗದಿ ವಿಚಾರ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಾನುಸಾರ ಕಿ.ಮೀ ಗೆ ಇಂತಿಷ್ಟು ಅಂತ ಟೋಲ್ ಅಂದಾಜು ಮಾಡುತ್ತಾರೆ.  ಮೇಲ್ಸೇತುವೆಗಳಿಗೆ ಟೋಲ್ ಜಾಸ್ತಿ ಇರುತ್ತದೆ. ಕುಂಬಳಗೋಡು, ಮದ್ದೂರಿನಲ್ಲಿ ಫೈ‌ ಓವರ್ ಇವೆ.  ಮೊದಲ ಹಂತದಲ್ಲಿ ಬೆಂಗಳೂರು-ನಿಡಘಟ್ಟ ನಡುವೆ ಟೋಲ್ ಶುರುವಾಗಿದೆ. 135 ರೂಪಾಯಿ ಟೋಲ್ ವಿಧಿಸಬೇಕೆಂದು ಶಿಫಾರಸು ಮಾಡಲಾಗಿದೆ.  ಇನ್ನೂ ಫೈನಲ್ ಆಗಿಲ್ಲ.  ಮೈಸೂರು-ಬೆಂಗಳೂರು ಹೆದ್ದಾರಿ ಕಾಮಗಾರಿ ಒಂದು ತಿಂಗಳಲ್ಲಿ ಮುಗಿಯುತ್ತದೆ. ಬಳಿಕ ಎರಡೂ ಕಡೆ ಸೇರಿ 250 ರೂಪಾಯಿ ಟೋಲ್ ಹಾಕಬಹುದು. ಪ್ರಧಾನಿ ನರೇಂದ್ರ ಮೋದಿ ಮಾರ್ಚ್ ಎರಡು ಅಥವಾ ಮೂರನೇ ವಾರ ಹೈವೇ ಉದ್ಘಾಟಿಸಲಿದ್ದಾರೆ.  ಮಂಡ್ಯದಲ್ಲಿ ಕಾರ್ಯಕ್ರಮ ಆಯೋಜಿಸುವ ಚಿಂತನೆ ಇದೆ ಎಂದರು.

ಮಗನಿಗಿಂತ ತಾಯಿಯೇ ಶ್ರೇಷ್ಠ: ರಸ್ತೆಯ ಹೆಸರು ವಿವಾದ ಮಾಡಬೇಡಿ.

ದಶಪಥ ರಸ್ತೆಗೆ ಕಾವೇರಿ ಹೆಸರಿಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ತಾಯಿ ದೊಡ್ಡವಳೋ, ಮಗ ದೊಡ್ಡವನೋ ಎಂಬ ಅನಗತ್ಯ ಗೊಂದಲ ತರಬೇಡಿ. ಮೈಸೂರು ಮಂಡ್ಯ ಬೆಂಗಳೂರಿಗೆ ಕಾವೇರಿ ತಾಯಿ ಇದ್ದಂತೆ. ತಾಯಿ ಕಾವೇರಿ ಹರಿದ ಕಾರಣಕ್ಕಾಗಿಯೇ ನಾಲ್ವಡಿ ಕೃಷ್ಣರಾಜ ಒಡೆಯರ್ ಅಣೆಕಟ್ಟೆ ಕಟ್ಟಿದರು. ಮಗನಿಗಿಂತ ತಾಯಿಯೇ ಶ್ರೇಷ್ಠ. ಈ ವಿಚಾರದಲ್ಲಿ ರಸ್ತೆಯ ಹೆಸರು ವಿವಾದ ಮಾಡಬೇಡಿ. ದೇಶದ ಯಾವುದೇ ಎಕ್ಸ್‌ಪ್ರೆಸ್‌ ಹೈವೆಗೆ ವ್ಯಕ್ತಿಯ ಹೆಸರು ಇಡುವ ಪದ್ಧತಿ ಇಲ್ಲ. ಕೇವಲ ನಗರದೊಳಗೆ ರಸ್ತೆಗಳಿಗೆ ಹೆಸರಿಡಲಾಗಿದೆ. ನಾವು ಈಗಾಗಲೇ ರಾಜಮನೆತನಕ್ಕೆ ಎಷ್ಟು ಗೌರವ ಕೊಡಬೇಕೋ ಅಷ್ಟನ್ನು ಕೊಟ್ಟಿದ್ದೇವೆ.  ಮೈಸೂರು ರೈಲ್ವೆ ನಿಲ್ದಾಣಕ್ಕೆ ಚಾಮರಾಜ ಒಡೆಯರ್ ಹೆಸರನ್ನ ಯಾವ ಮೈಸೂರಿನವರು ಇಡಲಿಲ್ಲ. ನಾನು ಮತ್ತು ಉಸ್ತುವಾರಿ ಸಚಿವರಾಗಿದ್ದ ವಿ.ಸೋಮಣ್ಣ ತೀರ್ಮಾನ ಮಾಡಿದ್ದೇವು. ನಾನು ಎಕ್ಸ್‌ಪ್ರೆಸ್‌ ಹೈವೆಗೆ  ಕಾವೇರಿ ಮಾತೆಯ ಪ್ರಸ್ತಾಪಿಸುತ್ತಿದ್ದಂತೆ. ಒಬ್ಜೊಬ್ಬರು ಒಂದೊಂದು ಹೆಸರು ಹೇಳುತ್ತಿದ್ದಾರೆ ಎಂದು ತಿಳಿಸಿದರು.

ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ ಬಹುತೇಕ ಪೂರ್ಣವಾಗುವ ಸ್ಥಿತಿಯಲ್ಲಿದೆ. ಬೆಂಗಳೂರು – ಮೈಸೂರು ಹೈವೆ ಲೋಕಾರ್ಪಣೆ ವೇಳೆಯೆ ಪ್ರಧಾನಿಗಳು ಕುಶಾಲನಗರ – ಮೈಸೂರು ನಡುವಿನ ಹೆದ್ದಾರಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. 3,500 ಕೋಟಿ ವೆಚ್ಚದಲ್ಲಿ 115 ಕಿ.ಮೀ. ಹೈವೆ ನಿರ್ಮಾಣ. ಶಂಕು ಸ್ಥಾಪನೆಯಾದ 24 ತಿಂಗಳಲ್ಲಿ ರಸ್ತೆ ಕಾಮಗಾರಿ ಪೂರ್ಣವಾಗಿದ ಎಂದರು.

Key words: Inauguration –mysore-bangalore- express highway -Toll – MP Pratap Simha