Sunday, August 9, 2026

BDA Apartments

Home Crime ಮೈಸೂರಿನಲ್ಲಿ ತಂದೆ, ಮಗನ ಕಿಡ್ನಾಪ್ ಪ್ರಕರಣ: 10 ಆರೋಪಿಗಳ ಬಂಧನ, 21 ಲಕ್ಷ ರೂ. ನಗದು...

ಮೈಸೂರಿನಲ್ಲಿ ತಂದೆ, ಮಗನ ಕಿಡ್ನಾಪ್ ಪ್ರಕರಣ: 10 ಆರೋಪಿಗಳ ಬಂಧನ, 21 ಲಕ್ಷ ರೂ. ನಗದು ವಶ.

ಮೈಸೂರು,ಫೆಬ್ರವರಿ,13,2023(www.justkannada.in): ಫೆ.6 ರಂದು ಮೈಸೂರು ಜಿಲ್ಲೆ ನಂಜನಗೂಡಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದ್ದ ತಂದೆ ಮಗನ ಕಿಡ್ನಾಪ್  ಪ್ರಕರಣವನ್ನ ಪೊಲೀಸರು ಭೇದಿಸಿದ್ದು 10 ಆರೋಪಿಗಳನ್ನ ಬಂಧಿಸಿ 21 ಲಕ್ಷ ರೂ. ನಗದು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮೈಸೂರು ಎಸ್ಪಿ ಸೀಮಾ ಲಾಟ್ಕರ್, ತಂದೆ, ಮಗನ ಕಿಡ್ನಾಪ್ ಪ್ರಕರಣ ಭೇದಿಸಲಾಗಿದ್ದು, 10 ಆರೋಪಿಗಳನ್ನ ಬಂಧಿಸಿ 21 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ. ಹರ್ಷ ಇಂಪೆಕ್ಸ್ ಫ್ಯಾಕ್ಟರಿ ಮಾಲೀಕ ದೀಪಕ್ ಮತ್ತು ಅವರ ಪುತ್ರ ಹರ್ಷ ಎಂಬ ಇಬ್ಬರ ಅಪಹರಣ ನಡೆದಿತ್ತು. ಉದ್ಯಮಿ ಮೊಬೈಲ್ ಫೋನ್‌ನಿಂದಲೇ  ಆರೋಪಿಗಳು ಕುಟುಂಬಸ್ಥರಿಗೆ ಕಾಲ್ ಮಾಡಿ 1 ಕೋಟಿ ರೂ. ನೀಡುವಂತೆ ಡಿಮಾಂಡ್ ಮಾಡಿದ್ದರು. ಈ ನಡುವೆ 35 ಲಕ್ಷ ರೂ. ಅನ್ನು ಆರೋಪಿಗಳು ವಸೂಲಿ ಮಾಡಿದ್ದರು. ಈ ಕುರಿತು ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮೂರು ತಂಡ ರಚಿಸಿ ಮೈಸೂರು ಪೊಲೀಸರು ಪ್ರಕರಣ ಭೇದಿಸಿದ್ದು, 10 ಆರೋಪಿಗಳನ್ನ ಬಂಧಿಸಲಾಗಿದೆ. ಮಂಡ್ಯ ಮೂಲದ ಎ1 ಕೊಲೆ ಪ್ರಕರಣದಲ್ಲಿ 11 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. ಸ್ನೇಹಿತರ ಟೀಮ್ ಮಾಡಿಕೊಂಡು ಕಿಡ್ನಾಪ್ ಮಾಡಿ ಮತ್ತೆ ಜೈಲು ಪಾಲಾಗಿದ್ದಾನೆ. ಪ್ರಕರಣಕ್ಕೆ ಬಳಸಿದ್ದ ಕಾರು, ಮೂರು ದ್ವಿಚಕ್ರ ವಾಹನ, 5 ಡ್ರಾಗರ್, 3 ಲಾಂಗ್, 11 ಮೊಬೈಲ್ ಫೋಮ್ ವಶಕ್ಕೆ ಪಡೆಯಲಾಗಿದೆ ಎಂದು ಮೈಸೂರು ಎಸ್ಪಿ ಸೀಮಾ ಲಾಟ್ಕರ್ ತಿಳಿಸಿದರು.

ಇನ್ನು ಆರೋಪಿಗಳು ಕಿಡ್ನಾಪ್ ಮಾಡಿ ಪೀಕಿದ ಹಣದಲ್ಲಿ ದೇವರಿಗೂ ಪಾಲು ನೀಡಿದ್ದರು ಎನ್ನಲಾಗಿದೆ.

Key words: Father- son- kidnapping- case –Mysore-10 accused-arrested,