ಸತ್ಯಸಾಯಿ ಆಶ್ರಮದಲ್ಲಿ ಮೆಡಿಕಲ್ ಕಾಲೇಜು ಉದ್ಘಾಟನೆ: ಇಂತಹ ಪುಣ್ಯಭೂಮಿಗೆ ಬಂದಿದ್ದು ನನ್ನ ಪುಣ್ಯ ಎಂದ ಪ್ರಧಾನಿ ಮೋದಿ.

Promotion

ಚಿಕ್ಕಬಳ್ಳಾಪುರ,ಮಾರ್ಚ್,25,2023(www.justkannada.in): ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ಬಳಿ ಇರುವ ಸತ್ಯಸಾಯಿ ಆಶ್ರಮದಲ್ಲಿ ಮಧೂಸೂದನ್ ವೈದ್ಯಕೀಯ ಶಿಕ್ಷಣ ಸಂಸ್ಥೆಯನ್ನ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

ಮೆಡಿಕಲ್ ಕಾಲೇಜು ಉದ್ಘಾಟನೆ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸತ್ಯಸಾಯಿ ಆಶ್ರಮದ ಶೈಕ್ಷಣಿಕ ಸಾಮಾಜಿಕ ವೈದ್ಯಕೀಯ ಸೇವೆ, ಸಾಮಾಜಿಕ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇಂತಹ ಪುಣ್ಯಭೂಮಿಗೆ ಬಂದಿದ್ದು ನನ್ನ ಪುಣ್ಯ.  ಇಂದು ದೇಶದಲ್ಲಿ 650 ಕ್ಕೂ ಹೆಚ್ಚು ಮೆಡಿಕಲ್ ಕಾಲೇಜುಗಳಿವೆ ಕರ್ನಾಟಕದಲ್ಲಿ ಸುಮಾರು 70ಕ್ಕೂ ಹೆಚ್ಚು ಮೆಡಿಕಲ್ ಕಾಲೇಜುಗಳಿವೆ. ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ದಿಯಾಗುತ್ತಿದೆ. ಬಡವರ ಅಭಿವೃದ್ದಿಯೇ ಬಿಜೆಪಿ ಸರ್ಕಾರದ ಪರಮೋಚ್ಛ ಗುರಿ. ಬಿಜೆಪಿ ಸರ್ಕಾರ ಬಡವರ ಸೇವೆಗೆ ಸದಾ ಸಿದ‍್ಧವಾಗಿದೆ ಬಡವರಿಗಾಗಿ ಜನೌಷಧ ಕೇಂದ್ರಗಳನ್ನ ತೆರೆಯಲಾಗಿದೆ . ಆಯುಷ್ಮಾನ್ ಭಾರತ್ ಯೋಜನೆಯಿಂದ ಬಡ ಜನರಿಗೆ ಅನುಕೂಲವಾಗಿದೆ. ಕರ್ನಾಟಕದ ಲಕ್ಷಾಂತರ ಬಡ ರೋಗಿಗಳಿಗೆ ಈ ಯೋಜನೆಯಿಂದ ಅನುಕೂಲವಾಗಿದೆ ಎಂದರು.

Key words: Inauguration – Medical College – Sathya Sai Ashram-Prime Minister –Modi