ಶಿಗ್ಗಾಂವಿಯಲ್ಲಿ ಮರಾಠ ಭವನ ಉದ್ಘಾಟನೆ: ವಿವಿಧ ಅಭಿವೃದ್ಧಿ ಕಾಮಗಾರಿಗೆ ಸಿಎಂ ಬೊಮ್ಮಾಯಿ ಶಂಕುಸ್ಥಾಪನೆ.

ಹಾವೇರಿ ,ಡಿಸೆಂಬರ್,24,2022(www.justkannada.in): ಭಾರತ ನೂರಾರು ಭಾಷಿಕರು ಇರುವ ದೇಶವಾಗಿದೆ ದೇಶದ ಅಖಂಡತೆ ಕಾಪಾಡುವುದು ಎಲ್ಲರ ಜವಾಬ್ದಾರಿ. ಎಲ್ಲಾ ಸಮುದಾಯ ಸೇರಿ ಒಂದು ಸಮಾಜ ನಿರ್ಮಾಣವಾಗುತ್ತದೆ. ಶತಮಾನಗಳೇ ಕಳೆದರೂ ಕನ್ನಡ ಗಟ್ಟಿಯಾಗಿ ನಿಂತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ನುಡಿದರು.

ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರು.  ಹಾಗೆಯೇ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಮರಾಠ ಭವನ ಉದ್ಘಾಟಿಸಿ ಮಾತನಾಡಿದ ಅವರು, ಮರಾಠ ನಿಗಮಕ್ಕೆ 100 ಕೋಟಿ ನೀಡಿದ್ದೇವೆ  ಮರಾಠ ಭವನ ಎಲ್ಲರಿಗೂ ಸದ್ಭಳಕೆಯಾಗಬೇಕು . ಮರಾಠಿಗರು ತುಂಬಾ ವರ್ಷದಿಂದ ಇದ್ದಾರೆ.  ಮರಾಠಿಗರು ನೂರಾರು ವರ್ಷ ಕರ್ನಾಟಕದಲ್ಲಿದ್ದಾರೆ.  ನಮ್ಮ ಕನ್ನಡಗರೂ ದೇಶದ ಮೂಲೆ ಮೂಲೆಯಲ್ಳೂ ಇದ್ದಾರೆ.  ಸಮಾಜ ಅಂದ್ರೆ ಒಂದು ಜಾತಿ ಅಲ್ಲ.  ಎಲ್ಲಾ ಸಮುದಾಯ ಸೇರಿ ಒಂದು ಸಮಾಜ ನಿರ್ಮಾಣವಾಗುತ್ತದೆ ಎಂದರು.

ಸಂವಿಧಾನ ಎಲ್ಲರಿಗೂ ಅವಕಾಶ ಕೊಟ್ಟಿದೆ ಬಾಬಾ ಸಾಹೇಬ್  ಅಂಬೇಡ್ಕರ್ ಮಹಾನ್ ವ್ಯಕ್ತಿ.  ಇಡೀ ದೇಶದ  ಚಿಂತನೆ ಮಾಡಿ ಸಂವಿಧಾನ ರಚಿಸಿದ್ದಾರೆ ಎಂದರು.

ಫೆಬ್ರವರಿಯಲ್ಲಿ ಬಜೆಟ್ ಮಂಡನೆ ಮಾಡುತ್ತೇನೆ. ಹಣಕಾಸು ಇಲಾಖೆ ಜತೆ ಈಗಾಗಲೇ ಚರ್ಚಿಸಿದ್ದೇನೆ. ಎಲ್ಲಾ ಇಲಾಖೆ ಅಧಿಕಾರಿಗಳ ಜೊತೆಗೂ ಚರ್ಚೆ ಮಾಡಲಿದ್ದೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: Inauguration – Maratha Bhavan – Shiggamvi-  CM Bommai