ಸಾಕ್ಷಿಕೊಟ್ಟು ಪ್ರೂವ್ ಮಾಡಿ ಆಗದಿದ್ರೆ ಸನ್ಯಾಸತ್ವ ಬಿಟ್ಟು ರಾಜಕೀಯಕ್ಕೆ ಬನ್ನಿ- ಜಯಮೃತ್ಯುಂಜಯ ಸ್ವಾಮೀಜಿಗೆ ಸಚಿವ ಮುರುಗೇಶ್ ನಿರಾಣಿ ನೇರ ಸವಾಲು.

ಬಾಗಲಕೋಟೆ,ಡಿಸೆಂಬರ್,24,2022(www.justkannada.in): ಸಮಾಜದ ಸಚಿವನಿಂದ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ತಪ್ಪಿತು ಎಂಬ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆಗೆ ಗರಂ ಆದ ಸಚಿವ ಮುರುಗೇಶ್ ನಿರಾಣೀ ಹಾಗೆ ಆಗಿದ್ದರೇ ನಾನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಸ್ವಾಮೀಜಿಗಳು ಸಾಕ್ಷಿಕೊಟ್ಟು ಪ್ರೂವ್ ಮಾಡಿ, ಆಗದಿದ್ರೆ ಸನ್ಯಾಸತ್ವ ಬಿಟ್ಟು ರಾಜಕೀಯಕ್ಕೆ ಬನ್ನಿ ಎಂದು ನೇರಸವಾಲು ಹಾಕಿದರು.

2ಎ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮಾತನಾಡಿದ ಸಚಿವ ಮುರುಗೇಶ್ ನಿರಾಣಿ,  80 ಲಕ್ಷ ಪಂಚಮಸಾಲಿಗಳಿರುವುದಕ್ಕೆ 2 ಪೀಠ ರಚನೆಯಾಗಿದೆ. ಸ್ವಾಮೀಜಿಗಳ ಬಗ್ಗೆ ನನಗೆ ಗೌರವವಿದೆ. ಚುನಾವಣೆಯಲ್ಲಿ ನನ್ನನ್ನ ಸೋಲಿಸುವ ಮಾತನಾಡುತ್ತಾರೆ.  ನಮ್ಮ ಸೋಲು ಗೆಲುವು ಮತದಾರರ ಕೈಯಲ್ಲಿದೆ ಬಾಯಿಚಪಲಕ್ಕೆ ಮಾತುಗಳನ್ನ ಕೇಳಿ ಮಾತನಾಡಬಾರದು ಎಂದು ಜಯಮೃತ್ಯುಂಜಯ ಸ್ವಾಮೀಜಿಗೆ ಟಾಂಗ್ ನೀಡಿದರು.

ಟಿಕೆಟ್ ಗಾಗಿ ಮುರುಗೇಶ ನಿರಾಣಿ ನನ್ನ ಮನೆ ಕಾಯುತ್ತಿದ್ದರು ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ನಿರಾಣಿ, ಟಿಕೆಟ್ ಕೇಳಿರಬಹುದು. ಯಾಕೆಂದರೆ ನಾನು ದೊಡ್ಡ ವ್ಯಕ್ತಿಯಲ್ಲ. ನಾನು ಟಿಕೆಟ್ ಗಾಗಿ ಸಾಕಷ್ಟು ಜನರ ಮನೆ ಬಾಗಿಲಿಗೆ ಹೋಗಿದ್ದೇನೆ. ಯತ್ನಾಳ್ ಮನೆ ಬಾಗಿಲಿಗೂ ಹೋಗಿರಬಹುದು ಎಂದರು.

ಯತ್ನಾಳ್ ಯಾರ್ಯಾರ ಮನೆಗೆ ಹೋಗಿದ್ದಾರೆ ಆತ್ಮಾವಲೋಕನ ಮಾಡಿಕೊಳ್ಳಲಿ. ಯಾರ ಯಾರ ಕಾಲಿಗೆ ಬೀಳುತ್ತಾರೆ ಎಂಬುದು ಗೊತ್ತು. ಕಳೆದ ವಾರ ದೆಹಲಿಯಲ್ಲಿ  ಶೋಭಾ ಕರಂದ್ಲಾಜೆ ಅವರ ಕಾಲಿಗೆ ಬಿದ್ದಿದ್ದರು. ನನ್ನನ್ನ ಬಿಎಸ್ ವೈ ಒಂದು ಮಾಡಿ ಎಂದು ಕಾಲಿಗೆ ಬಿದ್ದಿದ್ದರು ಎಂದು ಲೇವಡಿ ಮಾಡಿದರು.

Key words: Minister -Murugesh Nirani –tong- Jayamrityunjaya Swamiji.