ಜಲಜೀವನ್ ಮಿಷನ್ ಯೋಜನೆ ಜಾರಿ:  ಶೀಘ್ರವೇ ಇನ್ನು ಎರಡು ಕೋವಿಡ್ ಲಸಿಕೆ ಲಭ್ಯ- ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್…

ನವದೆಹಲಿ,ಫೆಬ್ರವರಿ,1,2021(www.justkannada.in): ಪೌಷ್ಠಿಕತೆ ವೃದ್ದಿಗೆ ಕೇಂದ್ರ ಸರ್ಕಾರದ ಆದ್ಯತೆ ನೀಡಲಿದ್ದು,  ಜಲಜೀವನ್ ಮಿಷನ್ ಯೋಜನೆ ಜಾರಿಗೊಳಿಸಲಿದ್ದೇವೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.jk

ಇಂದು 2021-22ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್‌ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್‌ ಅವರು ಮಂಡನೆ ಮಾಡುತ್ತಿದ್ದಾರೆ. ಬಜೆಟ್ ಮಂಡನೆ ವೇಳೆ ಮಾತನಾಡಿದ ಅವರು, ನಗರ ಸ್ವಚ್ಛ ಭಾರತ 2.0 ಯೋಜನೆ ಘೋಷಣೆ ಮಾಡಿದರು.

ಇನ್ನು ಕರೋನಾದದಿಂದ ಕಂಗೆಟ್ಟಿರುವ ದೇಶದ ಅರ್ಥಿಕ ಪರಿಸ್ಥಿತಿಯ ನಡುವೆ, 15 ವರ್ಷ ಹಳೆಯ ವಾಹನಗಳನ್ನು ಮಾಲಿನ್ಯ ನಿಯಂತ್ರಣಕ್ಕಾಗಿ ಸ್ವಯಂ ಪ್ರೇರಿತವಾಗಿ ಗುಜರಿಗೆ ಹಾಕಲು ಯೋಜನೆ ರೂಪಿಸಲಾಗಿದೆ. 20 ವರ್ಷ ಹಳೆಯದಾದ ಎಲ್ಲಾ ವಾಹನಗಳನ್ನು ಸ್ಕ್ಯಾಪ್ ಮಾಡಲು ಆದ್ಯತೆ ನೀಡಲಾಗುತ್ತದೆ ಎಂದಿದ್ದಾರೆ.Covid-Background-27.1 lakh crore-Package-Announcement-Finance-Minister-Nirmala Sitharaman

ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಲಾಗುತ್ತದೆ. ಕೋವಿಡ್ ಲಸಿಕೆಗೆ 35 ಸಾವಿರ ಕೋಟಿ ನೀಡಲಾಗಿದೆ. ಶೀಘ್ರದಲ್ಲಿಯೇ ದೇಶದಲ್ಲಿ ಇನ್ನೂ ಎರಡು ಕೋವಿಡ್ ಲಸಿಕೆ ಲಭ್ಯವಾಗಲಿದೆ. ಪೌಷ್ಠಿಕತೆ ವೃದ್ದಿಗೆ ಕೇಂದ್ರ ಸರ್ಕಾರದ ಆದ್ಯತೆ ನೀಡಲಿದೆ ಎಂದು ತಿಳಿಸಿದರು.

2021 ಹಲವು ಮೈಲಿಗಲ್ಲುಗಳಿಗೆ ಸಾಕ್ಷಿಯಾಗಲಿದೆ. 17 ಸಾವಿರ ಗ್ರಾಮೀಣ ವೆಲ್ ನೆಸ್ ಸೆಂಟರ್ ಗಳಿಗೆ ಬೆಂಬಲ ನೀಡಲಾಗುತ್ತದೆ. ರಾಷ್ಟ್ರೀಯ ಸಾಂಕ್ರಾಮಿಕ ರೋಗ ನಿಯಂತ್ರಣ ಕೇಂದ್ರ ಸ್ಥಾಪನೆ. ರಾಷ್ಟ್ರೀಯ ಹೆಲ್ತ್ ಮಿಷನ್ ಗೆ ಹೆಚ್ಚುವರಿಯಾಗಿ 65,180 ಕೋಟಿ ನೀಡಿಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

ENGLISH SUMMARY….

City Swach Bharath 2.0 Scheme announced: Two more vaccinations soon – FM Nirmala Seetharaman
New Delhi, Feb. 1, 2021 (www.justkannada.in): “With a view of giving priority for nutrition enhancement, we are introducing ‘Jaljeevan Mission Scheme,” opined Finance Minister Nirmala Seetharaman.
The Finance Minister is presenting the budget for the year 2021-22 at the Parliament today. She announced the introduction of the Swach Bharath 2.0 program.
A few other highlights as of now:
• A program motivating people to scrap vehicles that are more than 15 years old – Priority will be given to scrapping all the vehicles that are more than 20 years old.Covid-Background-27.1 lakh crore-Package-Announcement-Finance-Minister-Nirmala Sitharaman
• Priority for supply of drinking water supply to people.
• A sum of Rs. 35,000 crore is already provided for COVID vaccination. Two more new vaccinations to be made available soon.
• Govt. of India to give priority to nutrition enhancement.
• 2021 will witness new milestones. Support for 17,000 rural wellness centers.
• National Epidemic Diseases Control Centre to be established.
• An additional sum of Rs. 65,180 crore for the National Health Mission.

Keywords: 2021-2022 Central budget/ Finance Minister/ Nirmala Seetharaman

Key words: Implementation – aquatic- life mission-Two more -covid vaccines – soon- Union Finance Minister -Nirmala Sitharaman.