ಇಂದು ಎಸ್ ಐಟಿ ಮುಂದೆ ವಿಚಾರಣೆಗೆ ಹಾಜರಾಗ್ತಾರಾ ಡಿಸಿಪಿ ಅಜಯ್ ಹಿಲೋರಿ…

Promotion

ಬೆಂಗಳೂರು,ಆ,2,2019(www.justkannada.in): ಐಎಂಎ ವಂಚನೆ ಪ್ರಕರಣ ಸಂಬಂಧ ಇಂದು ಎಸ್ ಐಟಿ ಅಧಿಕಾರಿಗಳ ಮುಂದೆ ಡಿಸಿಪಿ ಅಜಯ್ ಹಿಲೋರಿ ಹಾಜರಾಗಬೇಕಿದೆ.

ಈ ಹಿಂದೆ ಅಜಯ್ ಹಿಲೋರಿ ಪೂರ್ವ ವಿಭಾಗದ ಡಿಸಿಪಿಯಾಗಿದ್ದರು. ಐಎಂಎ ವಂಚನೆ ಪ್ರಕರಣದಲ್ಲಿ ಕ್ಲೀನ್ ಚೀಟ್ ನೀಡಿದ್ದ ಆರೋಪದಲ್ಲಿ  ಡಿಸಿಪಿ ಅಜಯ್ ಹಿಲೋರಿ ಅವರನ್ನ ಎಸ್ ಐಟಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.   ಇಂದು ಎಸ್ ಐಟಿ ಮುಂದೆ ಹಾಜರಾಗುವಂತೆ ಅಜಯ್ ಹಿಲೋರಿ ಸೇರಿ ಎಸಿಪಿ ರಮೇಶ್ ಹಾಗೂ ಇನ್ಸ್ ಪೆಕ್ಟರ್ ರಮೇಶ್ ಗೆ ಎಸ್ ಐಟಿ ನೋಟೀಸ್ ನೀಡಿತ್ತು.

ಹೀಗಾಗಿ ಇಂದು ಬೆಳಿಗ್ಗೆ 11 ಗಂಟೆಗೆ ಅಜಯ್ ಹಿಲೋರಿ  ಅವರು ಎಸ್ ಐಟಿ ಮುಂದೆ ಹಾಜರಾಗುವ ಸಾಧ್ಯತೆ ಇದೆ. ಈಗಾಗಲೇ ಐಎಂಎ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ನನ್ನು ಬಂಧಿಸಲಾಗಿದೆ.

Key words: IMA-fraud-case- DCP- Ajay Hillary – SIT -today.