ನಾನು ಭಾರತಕ್ಕೆ ಕಾಲಿಟ್ಟರೆ ಕೊರೊನಾ ಕಂಟ್ರೋಲ್ ಎಂದ ನಿತ್ಯಾನಂದ !

Promotion

ಬೆಂಗಳೂರು, ಜೂನ್ 08, 2021 (www.justkannada.in): ನಾನು ಕಾಲಿಟ್ಟಾಗ ಮಾತ್ರ, ಭಾರತದಿಂದ ಕೊರೋನಾ ವೈರಸ್ ನಿರ್ಮೂಲನೆಯಾಗುತ್ತದೆ  ಎಂದಿದ್ದಾರೆ ಸ್ವಾಮಿ ನಿತ್ಯಾನಂದ!

ಹೌದು. ಈಕ್ವೆಡಾರ್ ಕರಾವಳಿಯಲ್ಲಿ ‘ಕೈಲಾಸ’ ಎಂದು ಕರೆಯಲ್ಪಡುವ ‘ವರ್ಚುವಲ್ ಐಲ್ಯಾಂಡ್’ ಅನ್ನು ಸ್ಥಾಪಿಸಿರುವುದಾಗಿ ಹೇಳಿಕೊಂಡಿರುವ ನಿತ್ಯಾನಂದ, ಹೊಸ ವೀಡಿಯೊದಲ್ಲಿ, ಕೋವಿಡ್-19 ಕುರಿತು ಮಾತನಾಡಿದ್ದಾನೆ.

ನಾನು ಕಾಲಿಟ್ಟಾಗ ಮಾತ್ರ, ಭಾರತದಿಂದ ಕೊರೋನಾ ವೈರಸ್ ನಿರ್ಮೂಲನೆಯಾಗುತ್ತದೆ ಎಂದು ಈ ಸ್ವಯಂ ಘೋಷಿತ ದೇವಮಾನವ ಹೇಳಿದ್ದಾನೆ.

‘ಕೈಲಾಸ’ವನ್ನು ಪ್ರತ್ಯೇಕ ದೇಶವೆಂದು ಘೋಷಿಸುವಂತೆ ಕೋರಿ ವಿಶ್ವಸಂಸ್ಥೆಗೆ ಮನವಿ ಮಾಡಿರುವುದಾಗಿ ಈ ವಿಡೀಯೋದಲ್ಲಿ ನಿತ್ಯಾನಂದ ಹೇಳಿದ್ದಾನೆ,

‘ಅಮ್ಮನ್’ ದೇವಿಯು ತನ್ನ ಆಧ್ಯಾತ್ಮಿಕ ದೇಹವನ್ನು ಪ್ರವೇಶಿಸಿದ್ದಾಳೆ, ನಾನು ಭಾರತೀಯ ನೆಲದ ಮೇಲೆ ಕಾಲಿಟ್ಟಾಗ ಮಾತ್ರ ಕೋವಿಡ್-19 ಭಾರತವನ್ನು ತೊರೆಯುತ್ತಾಳೆ ಎಂದು ಹೇಳಿದ್ದಾನೆ ನಿತ್ಯಾನಂದ.