ನಾನು ‘ಕೈ’ ಪಕ್ಷದಲ್ಲೇ ಇದ್ದೇನೆ: ನಾಳೆ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತೇನೆ- ಮಾಜಿ ಸಚಿವ ರಾಮಲಿಂಗರೆಡ್ಡಿ ಸ್ಪಷ್ಟನೆ…

Promotion

ಬೆಂಗಳೂರು,ಜು,14,2019(www.justkannada.in):  ನಾನು ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ. ನಾಳೆ ನಡೆಯುವ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ರಾಜೀನಾಮೆ ನೀಡಿರುವ ಅತೃಪ್ತ ಶಾಸಕ ರಾಮಲಿಂಗರೆಡ್ಡಿ ಅವರು ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ರಾಮಲಿಂಗರೆಡ್ಡಿ, ನಾಳೆ 4 ಗಂಟೆಗೆ ಸ್ಪೀಕರ್ ಕರೆದಿದ್ದಾರೆ. ಹೀಗಾಗಿ ನಾಳೆ ಸಂಜೆ ಸ್ಪೀಕರ್ ಅವರನ್ನ ಭೇಟಿಯಾಗುವೆ. ರಾಜಕೀಯದ ಬಗ್ಗೆ ಜುಲೈ 15ರ ಬಳಿಕ ಮಾತನಾಡುತ್ತೇನೆ. ನಾನು ಕಾಂಗ್ರೆಸ್ ಪಕ್ಷ ಬಿಟ್ಟಿಲ್ಲ ಎಂದರು.

ತಮ್ಮ ಪುತ್ರಿ ಸೌಮ್ಯ ರೆಡ್ಡಿ ಯಾವುದೇ ನಿರ್ಧಾರ ಕೈಗೊಳ್ಳಲು ಸ್ವತಂತ್ರರು. ನನಗೆ ರಾಜೀನಾಮೆ ವಾಪಾಸ್ ಪಡೆಯದಂತೆ ಬಿಜೆಪಿ ನಾಯಕರು ಒತ್ತಡ ಹೇರಿದ್ದಾರೆ ಎಂಬುದು ಸತ್ಯಕ್ಕೆ ದೂರವಾದದ್ದು, ನನಗೆ ಎಲ್ಲ ಪಕ್ಷದಲ್ಲಿ ಸ್ನೇಹಿತರಿದ್ದಾರೆ. ಎಲ್ಲರೂ ಭೇಟಿಯಾಗುತ್ತಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಅವರು ಹೇಳಿದರು.

Key words:   I- will- attend – session- tomorrow-Ramalingareddy