ನಾನು ಸಾವರ್ಕರ್ ಅಲ್ಲ, ಗಾಂಧಿ ಕುಟುಂಬದ ರಾಹುಲ್: ನನ್ನ ಹೋರಾಟ ಮುಂದುವರೆಯುತ್ತೆ- ರಾಹುಲ್ ಗಾಂಧಿ.

Promotion

ನವದೆಹಲಿ,ಮಾರ್ಚ್,25,2023(www.justkannada.in): ನಾನು ಸಾವರ್ಕರ್ ಅಲ್ಲ, ಗಾಂಧಿ ಕುಟುಂಬದ ರಾಹುಲ್. ನನ್ನ ಹೋರಾಟ ಮುಂದುವರೆಯುತ್ತೆ. ನನ್ನನ್ನು ಸಂಸದ ಸ್ಥಾನದಿಂದ ಶಾಶ್ವತವಾಗಿ ಅನರ್ಹಗೊಳಿಸಿದರೂ, ನಾನು ನನ್ನ ಹೋರಾಟವನ್ನ ಮುಂದುವರೆಸುತ್ತೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.

ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಹುಲ್ ಗಾಂಧಿ, ಭಾರತ ನನಗೆ ಪ್ರೀತಿ ಗೌರವ ಎರಡನ್ನೂ ಕೊಟ್ಟಿದೆ. ವಯನಾಡು ಲೋಕಸಭಾ ಕ್ಷೇತ್ರದ ಜನರಿಗೆ ನಾನು ಪತ್ರ ಬರೆದಿದ್ದೇನೆ. ವಯನಾಡು ಕ್ಷೇತ್ರದ ಜನರು ತಮ್ಮ ಹೃದಯದಲ್ಲಿ ನನಗೆ ಸ್ಥಾನ ನೀಡಿದ್ದಾರೆ. ನನ್ನ ಬೆನ್ನಿಗೆ ನಿಂತಿರುವ ವಿರೋಧ ಪಕ್ಷಗಳಿಗೆ ಧನ್ಯವಾದ ಹೇಳುತ್ತೇನೆ  ಸದಸ್ಯತ್ಬ ಅನರ್ಹಗೊಳಿಸಿದ್ದಾರೆ. ನನ್ನ ಹೋರಾಟ ಮುಂದುವರೆಸುತ್ತೇನೆ ಎಂದರು.

ಭ್ರಷ್ಟ ಅದಾನಿ ವಿರುದ್ದ ಮೋದಿ ಯಾಕೆ ಕ್ರಮ ಕೈಗೊಂಡಿಲ್ಲ ಅಂತಾ ಜನ ಪ್ರಶ್ನಿಸುತ್ತಿದ್ದಾರೆ. ಅಂದು ನಾನು ಮಾಡಿರುವ ಭಾಷಣದಲ್ಲಿ ಯಾವುದೇ ನಿರ್ದಿಷ್ಟ ಜಾತಿಯನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಿರಲಿಲ್ಲ. ಅದಾನಿ ಕುರಿತ ನನ್ನ ಮುಂದಿನ ಭಾಷಣಕ್ಕೆ ಪ್ರಧಾನಿ ಹೆದರಿದ್ದು, ಅವರ ಕಣ್ಣಲ್ಲಿ ಅದನ್ನು ಕಂಡಿದ್ದೇನೆ. ಅದಕ್ಕಾಗಿಯೇ, ಮೊದಲು ಗೊಂದಲಕ್ಕೀಡಾಗಿ ನಂತರ ನನ್ನನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ ಎಂದು ಕಿಡಿಕಾರಿದರು.

Key words: I am not- Savarkar, Rahul – Gandhi family- Rahul Gandhi.