ನಾನೂ ಕೂಡ ಇದೇ ಅವಧಿಯಲ್ಲಿ ಸಿಎಂ ಆಗ್ತೀನಿ- ಹೊಸಬಾಂಬ್ ಸಿಡಿಸಿದ ಸಚಿವ ಉಮೇಶ್ ಕತ್ತಿ.

Promotion

ಬಾಗಲಕೋಟೆ,ಆಗಸ್ಟ್,15,2021(www.justkannada.in): ಜೀವಂತವಿದ್ದರೇ ನಾನೂ ಕೂಡ ಇದೇ ಅವಧಿಯಲ್ಲಿ ಸಿಎಂ ಆಗ್ತೀನಿ ಎಂದು ಹೇಳುವ ಮೂಲಕ ಆಹಾರ ಸಚಿವ ಉಮೇಶ್ ಕತ್ತಿ ಸ್ವಾತಂತ್ರ್ಯ ದಿನಾಚರಣೆ ಹೊಸ ಬಾಂಬ್ ಸಿಡಿಸಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಸಚಿವ ಉಮೇಶ್ ಕತ್ತಿ, ಬರುವ ದಿನಗಳಲ್ಲಿ ನಾನೂ ಮುಖ್ಯಮಂತ್ರಿ ಆಗಬಹುದು. ಅಥವಾ ಇದೇ ಅವಧಿಯಲ್ಲಿ ನಾನು ಸಿಎಂ ಆಗಬಹುದು. ಜೀವಂತ ಇದ್ರೆ ಇದೇ ಅವಧಿಯಲ್ಲಿ ನಾನು ಮುಖ್ಯಮಂತ್ರಿ ಆಗ್ತೀನಿ. ಸತ್ತರೆ ನನ್ನ ಕಡೆಯಿಂದ ಏನೂ ಮಾಡಲು ಆಗಲ್ಲ ಎಂದರು. Food Minister- Umesh katti- answer - ration -rice -good - die

ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಉಮೇಶ್ ಕತ್ತಿ,  ಸಿ.ಟಿ ರವಿಯವರು ಇಂದಿರಾ ಬದಲು ಅನ್ನಪೂರ್ಣೇಶ್ವರಿ ಹೆಸರಿಡಿ ಎಂದಿದ್ದಾರೆ. ಇದು ಯಾವ ಪಕ್ಷದ್ದಲ್ಲ, ಈ ಬಗ್ಗೆ ಜನರಲ್ಲಿ ಚರ್ಚೆಯಾಗಲಿ. ರಾಜ್ಯದ ಜನ ಚರ್ಚೆ ಮಾಡಿ, ಒಂದು ತೀರ್ಮಾನಕ್ಕೆ ಬರಲಿ. ಜನ ಏನು ತೀರ್ಮಾನ ತೆಗೆದುಕೊಳ್ತಾರೆ ಅದನ್ನು ಮಾಡೋಣ ಎಂದು ತಿಳಿಸಿದರು.

Key words: I am – CM -same period-minister- Umesh katti-new bomb.