ಈಗ ನನ್ನ ಪುತ್ರಿ ಆತ್ಮಕ್ಕೆ ಶಾಂತಿ ಸಿಕ್ಕಂತಾಗಿದೆ- ನಾಲ್ವರು ಆರೋಪಿಗಳ ಎನ್ ಕೌಂಟರ್ ಬಗ್ಗೆ ಮೃತ ಪಶುವೈದ್ಯೆ ತಂದೆ ಪ್ರತಿಕ್ರಿಯೆ…

Promotion

ಹೈದರಾಬಾದ್,ಡಿ,6,2019(www.justkannada.in): ಹೈದರಬಾದ್ ಬಳಿ ಪಶುವೈದ್ಯೆ ಮೇಲೆ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನ ಪೊಲೀಸರು ಎನ್ ಕೌಂಟರ್ ಮಾಡಿದ್ದು ಈ ಬಗ್ಗೆ ಪ್ರತಿಕ್ರಿಯಿಸಿರುವ ಮೃತ ದಿಶಾ ತಂದೆ, ಈಗ ನನ್ನ ಪುತ್ರಿ ದಿಶಾ ಆತ್ಮಕ್ಕೆ ಶಾಂತಿ ಸಿಕ್ಕಿದೆ. ಪೊಲೀಸರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.

 ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನನ್ನ ಮಗಳು ತೀರಿಕೊಂಡು 10 ದಿನಗಳು ಕಳೆದಿವೆ. ಈಗ ಆರೋಪಿಗಳನ್ನ ಎನ್ ಕೌಂಟರ್ ಮಾಡಿದ್ದು ನನ್ನ ಪುತ್ರಿ ಆತ್ಮಕ್ಕೆ ಶಾಂತಿ ಸಿಕ್ಕಿದೆ. ಇದಕ್ಕಾಗಿ ನಾನು ಪೊಲೀಸ್ ಮತ್ತು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಮಗಳ ಆತ್ಮವು ಈಗ ಸಮಾಧಾನವಾಗಿರಬೇಕು ಎಂದು ಹೇಳಿದ್ದಾರೆ.

ತೆಲಂಗಾಣದ ಹೈದರಾಬಾದ್‌ ಹೊರವಲಯದ ಶಂಶಾಬಾದ್‌ ಬಳಿ ಪಶುವೈದ್ಯೆಯ ಮೇಲೆ ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿದ್ದರು. ಪ್ರಕರಣ ಸಂಬಂಧ  ಆರೋಪಿಗಳಾದ ಮಹಮ್ಮದ್‌ ಆರೀಫ್‌, ಜೊಲ್ಲು ಶಿವ, ಚನ್ನಕೇಶವಲು ಹಾಗೂ ಜೊಲ್ಲು ನವೀನ್‌ ಬಂಧಿಸಲಾಗಿತ್ತು. ಆರೋಪಿಗಳನ್ನ ಸ್ಥಳ ಪರಿಶೀಲನೆಗೆ ಕರೆದುಕೊಂಡು ಹೋದ ವೇಳೆ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ನಾಲ್ವರು ಆರೋಪಿಗಳನ್ನ ಎನ್ ಕೌಂಟರ್ ಮಾಡಿದ್ದಾರೆ.  ಇಂದು ಮುಂಜಾನೆ 3:30 ರ ಸುಮಾರಿಗೆ ಹುಬ್ಬಳ್ಳಿ ಮೂಲದ ವಿಶ್ವನಾಥ್ ಸಜ್ಜನರ್ ನೇತೃತ್ವದ ಪೊಲೀಸ್ ಕಮಿಷನರ್ ತಂಡ  ಎನ್‌ಕೌಂಟರ್‌ ಕಾರ್ಯಾಚರಣೆ ನಡೆಸಿತು.

Key words:  hydarabad- veterinarian doctor- rape-murder-case- accused –encounter-police