ಗುಡಿಸಲಿಗೆ ಬೆಂಕಿ: ಓರ್ವ ವ್ಯಕ್ತಿ ಸಜೀವ ದಹನ.

Promotion

ಬೀದರ್,ಡಿಸೆಂಬರ್,31,2022(www.justkannada.in):  ಗುಡಿಸಲಲ್ಲಿ ಬೆಂಕಿ ಕಾಣಿಸಿಕೊಂಡು  ಓರ್ವ ವ್ಯಕ್ತಿ ಸಜೀವ ದಹನವಾಗಿರುವ ಘಟನೆ ಬೀದರ್ ನಲ್ಲಿ ನಡೆದಿದೆ.

ಬಾಲ್ಕಿ ತಾಲ್ಲೂಕಿನ ಹರನಾಳ ಗ್ರಾಮದ ಜಮೀನಿನಲ್ಲಿ ಈ ಘಟನೆ ನಡೆದಿದೆ.  ಗುಡಿಸಲಿನಲ್ಲಿ ಮಲಗಿದ್ದ ಜಗನ್ನಾಥ ಹಲಗೆ (60) ಸಜೀವ ದಹನವಾಗಿದ್ದಾರೆ.   ಜಗನ್ನಾಥ್  ರಕ್ಷಿಸಲು ಹೋದ ಮಾರುತಿಗೆ ಗಾಯಗಳಾಗಿವೆ.

ಜಗನ್ನಾಥ್ ಮತ್ತು ಮಾರುತಿ ರಾತ್ರಿ ಗುಡಿಸಲಿನಲ್ಲಿ  ಪಾರ್ಟಿ ಮಾಡಿದ್ದರು. ತಡರಾತ್ರಿ ಪಾರ್ಟಿ ಮಾಡಿ ಗುಡಸಲಿನಲ್ಲಿ ಮಲಗಿದ್ದರು. ಈ ವೇಳೆ ಬೆಂಕಿ ಕಾಣಿಸಿಕೊಂಡು ಈ ಅವಘಡ ಸಂಭವಿಸಿದೆ. ಈ ಕುರಿತು ಭಾಲ್ಕಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Hut- fire- One person- burnt -alive