ಹುಣಸೂರು ನಗರಸಭೆ ಅಧಿಕಾರದ ಗದ್ಧುಗೆಗೇರಿದ ಕಾಂಗ್ರೆಸ್..

Promotion

ಮೈಸೂರು,ಅಕ್ಟೋಬರ್,31,2020(www.justkannada.in): ಹುಣಸೂರು ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿದಿದೆ. ಕಾಂಗ್ರೆಸ್ ನ ಅನುಷಾ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ದೇವನಾಯ್ಕ ಆಯ್ಕೆಯಾಗಿದ್ದಾರೆ. hunsur-town-council-chairman-vice-president-election-congress-won

ಹುಣಸೂರು ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನುಷಾ 20 ಮತಗಳನ್ನ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಹಾಗೆಯೇ  ದೇವನಾಯ್ಕ ಕೂಡ 20 ಮತಗಳನ್ನ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು.hunsur-town-council-chairman-vice-president-election-congress-won

ಜೆಡಿಎಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಹೀನಾಬಾನು ಹಾಗೂ ಉಪಾಧ್ಯಕ್ಷ ಸ್ಥಾನದ ಪಕ್ಷೇತರ ಸದಸ್ಯೆ ಆಶಾರಾಣಿ ತಲಾ 11 ಮತ ಪಡೆದು ಸೋಲು ಅನುಭವಿಸಿದರು. ಶಾಸಕ ಮಂಜುನಾಥ್ ಚುನಾವಣೆಯಲ್ಲಿ ಭಾಗವಹಿಸಿದ್ದರೆ, ಸಂಸದ ಪ್ರತಾಪ ಸಿಂಹ, ಎಂ.ಎಲ್.ಸಿ. ವಿಶ್ವನಾಥ್ ಹಾಗೂ ಬಿಜೆಪಿ ಸದಸ್ಯ ವಿವೇಕ್ ಗೈರಾಗಿದ್ದರು. ಉಪ ವಿಭಾಗಾಧಿಕಾರಿ ವೀಣಾ ಚುನಾವಣಾಧಿಕಾರಿಯಾಗಿದ್ದರು.

Key words: hunsur- Town Council- Chairman -Vice President –election-congress-won