ಡಿಕೆಶಿ, ಸಿದ್ದುಗೆ ಟವಲ್ ಹಾಕೋದು ಬಿಟ್ಟು ಬೇರೆ ಕೆಲಸವಿಲ್ಲ : ಸಚಿವ ಆರ್.ಅಶೋಕ್ ಟೀಕೆ 

ಬೆಂಗಳೂರು,ಅಕ್ಟೋಬರ್,31,2020(www.justkannada.in) :  ಸಿಎಂ ಕುರ್ಚಿಗೆ ಬೆಳಗ್ಗೆ ಡಿ.ಕೆ.ಶಿವಕುಮಾರ್ ಟವಲ್ ಹಾಕ್ತಾರೆ. ಸಂಜೆ ಸಿದ್ದರಾಮಯ್ಯ ಆ ಟವಲ್ ತೆಗೆದು ತಮ್ಮ ಟವಲ್ ಹಾಕಿ ಬರುತ್ತಾರೆ. ಟವಲ್ ಹಾಕೋದು ಬಿಟ್ಟು ಬೇರೆ ಕೆಲಸವಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಟೀಕಿಸಿದರು.jk-logo-justkannada-logo

ಸಿದ್ದರಾಮಯ್ಯ ಅಭಿವೃದ್ಧಿ ಮಾಡಲಿಲ್ಲ. ಹೀಗಾಗಿ, ಜನ ಸಿದ್ದು ಅವರನ್ನು ವಿಧಾನಸೌಧದಿಂದ ಹೊರಹಾಕಿದರು.ಇವತ್ತು ಜಾತಿ ರಾಜಕೀಯದ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ ನವರು ಊಟಕ್ಕೆ ವಿಷ ಹಾಕಿ ಕೊಟ್ಟರು.ಹೀಗಾಗಿ, ನಾನು ವಿಷಕಂಠನಾದೆ ಎಂದು ಎಚ್.ಡಿ.ಕೆ ಹೇಳಿದ್ದಾರೆ ಎಂದು ವ್ಯಂಗ್ಯವಾಗಿ ಹೇಳಿದರು.

ಡಿ.ಕೆ.ಶಿವಕುಮಾರ್ ಅವರಿಗೆ ಮೊದಲ ಸೋಲಿನ ರುಚಿ ಈ ಉಪಚುನಾವಣೆಯಲ್ಲಿ ಸಿಗಲಿದೆ. ಕಾಂಗ್ರೆಸ್ ಪಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಟೆಸ್ಟ್ ಡ್ರೈವ್ ಕಾರ್ ಮಾಡಿಕೊಂಡಿದ್ದಾರೆ. ಉಪಯೋಗಿಸಿ ಬಿಡುವ ಹಾಗೆ ಎಂದು ವ್ಯಂಗ್ಯವಾಗಿ ನುಡಿದಿದ್ದಾರೆ.

Dikeshi-put-towel-sidhu-leave-no-other-work-Minister-R.Ashok-criticized

key words : Dikeshi-put-towel-sidhu-leave-no-other-work-Minister-R.Ashok-criticized