ಹುಣಸೂರು ನಗರಸಭೆ ಚುನಾವಣೆ ಫಲಿತಾಂಶ ಅತಂತ್ರ: ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಕಾಂಗ್ರೆಸ್..

ಮೈಸೂರು,ಫೆ,11,2020(www.justkannada.in):  ಮೈಸೂರು ಜಿಲ್ಲೆ ಹುಣಸೂರು ನಗರಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ.

ಒಟ್ಟು 31 ಸ್ಥಾನಗಳಿರುವ ಹುಣಸೂರು ನಗರಸಭೆ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು,  ಕಾಂಗ್ರೆಸ್ 14 ವಾರ್ಡ್ ಗಳಲ್ಲಿ, ಜೆಡಿಎಸ್  7, ಬಿಜೆಪಿ 3, ಎಸ್ ಡಿ ಪಿ ಐ  1, ಪಕ್ಷೇತರರು  6 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಹುಣಸೂರು ಬೈ ಎಲೆಕ್ಷನ್ ನಲ್ಲಿ ಹಳ್ಳಿಹಕ್ಕಿ ಹೆಚ್ ವಿಶ್ವನಾಥ್ ತಾನು ಸೋತರೂ ಇದೀಗ ನಗರಸಭೆಯಲ್ಲಿ ಬಿಜೆಪಿ ಖಾತೆ ತೆರೆಯುವಂತೆ ಮಾಡಿದ್ದಾರೆ. ಮೊದಲ ನಗರಸಭೆ ಚುನಾವಣೆಯಲ್ಲೆ ಸೊನ್ನೆಯಿಂದ ಮೂರು ಸ್ಥಾನವನ್ನ ಬಿಜೆಪಿ ಗಳಿಸಿದೆ.

ಇನ್ನು ಕಾಂಗ್ರೆಸ್ ಪಕ್ಷೇತರರ ಸಹಾಯದಿಂದ ಅಧಿಕಾರ ಹಿಡಿಯಲಿದ್ದು ಈ ಮೂಲಕ ಶಾಸಕ ಮಂಜುನಾಥ್ ನೇತೃತ್ವದಲ್ಲಿ ಮೊದಲ ನಗರಸಭೆ ಕೈ ವಶವಾಗಲಿದೆ. ಕಾಂಗ್ರೆಸ್ ಗೆ ಪೈಪೋಟಿ ನೀಡುವಲ್ಲಿ ಜೆಡಿಎಸ್ ಪಕ್ಷ. ವಿಫಲವಾಗಿದ್ದು, ಮೊದಲ ನಗರಸಭೆ ಆಡಳಿತಕ್ಕಾಗಿ ‘ಕೈ’ ಕಮಾಲ್ ಮಾಡಿದೆ.

Key words: hunsur-Municipal –elections- result- Congress – largest party