ಶಾಸಕ ಎಸ್.ಎ ರಾಮದಾಸ್‌ ಗೆ ಲಘು ಹೃದಯಾಘಾತ‌: ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು….

ಮೈಸೂರು,ಫೆ,11,2020(www.justkannada.in):  ಕೆ.ಆರ್. ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ ರಾಮದಾಸ್ ಗೆ ಲಘು ಹೃದಯಾಘಾತ‌ವಾಗಿದ್ದು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಲಘು ಹೃದಯಾಘಾತದ ಪರಿಣಾಮ ಶಾಸಕ ರಾಮದಾಸ್‌ ಗೆ ಸ್ಟಂಟ್ ಅಳವಡಿಕೆ ಮಾಡಲಾಗಿದೆ. ಶಾಸಕ ಎಸ್ ಎ ರಾಮದಾಸ್  ಆ್ಯಂಜಿಯೊ ಪ್ಲಾಸ್ಟ್ ಚಿಕಿತ್ಸೆಗೆ ಒಳಗಾಗಿದ್ದಾರೆ.  ಮಧ್ಯರಾತ್ರಿ ವೇಳೆ ರಾಮದಾಸ್ ಹೃದಯಾಘಾತಕ್ಕೆ ತುತ್ತಾಗಿದ್ದರು. ತಕ್ಷಣ ಅವರನ್ನ ಅಪೋಲೋ ಅಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಮಧ್ಯ ರಾತ್ರಿಯಲ್ಲೇ ವೈದ್ಯರ ತಂಡ  ಶಾಸಕ ರಾಮದಾಸ್ ಗೆ ಆ್ಯಂಜಿಯೋ‌ಪ್ಲಾಸ್ಟ್ ಚಿಕಿತ್ಸೆ ನೀಡಿದ್ದಾರೆ.  ರಕ್ತನಾಳ ಹೆಪ್ಪುಗಟ್ಟಿದ್ದರಿಂದ ಹೃದಯಾಘಾತ ಸಂಭವಿಸಿದ್ದು, ಸದ್ಯ ಶಾಸಕ ರಾಮದಾಸ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Key words: heart attack –MLA-SA Ramadas- Admission – private hospital – Mysore.