ದೇವರಾಜ ಅರಸು ಅವರ ಬೆನ್ನಿಗೆ ಚೂರಿ ಹಾಕಿ‌ ಹೋದವರು ಹೆಚ್. ವಿಶ್ವನಾಥ್-ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ…

Promotion

ಮೈಸೂರು,ಡಿ,3,2019(www.justkannada.in): ದೇವರಾಜ ಅರಸು ಅವರ ಬೆನ್ನಿಗೆ ಚೂರಿ ಹಾಕಿ‌ ಹೋದವರು ಹೆಚ್. ವಿಶ್ವನಾಥ್. ಈಗ ನಾನು ಅವರ ಶಿಷ್ಯ ಅಂತ ಹೇಳಿಕೊಳ್ಳುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಹುಣಸೂರಿನಲ್ಲಿ ಇಂದು ಮಾತನಾಡಿದ ಸಿದ್ದರಾಮಯ್ಯ, ವಿಶ್ವನಾಥ್ 83 ರಲ್ಲಿ ಗೆದ್ದ ಆಸಾಮಿ. ಆಗಿಂದಲೂ ಹುಣಸೂರು ಜಿಲ್ಲೆ ಬಗ್ಗೆ ಮಾತನಾಡಿರಲಿಲ್ಲ. ದೇವರಾಜ ಅರಸು ಅವರ ಬೆನ್ನಿಗೆ ಚೂರಿ ಹಾಕಿ‌ ಹೋದವರು ವಿಶ್ವನಾಥ್. ಈಗ ನಾನು ಅವರ ಶಿಷ್ಯ ಅಂತ ಹೇಳಿಕೊಳ್ಳುತ್ತಾರೆ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎನ್ನುವಂತಾಗಿದೆ. ಅವರು ಹಣದ ಆಮಿಷ ಒಡ್ಡುತ್ತಾರೆ. ಮತದಾರರು ಹಣದ ಆಮಿಷಕ್ಕೆ ಒಳಗಾಗದೆ ಕೆಲಸ ಮಾಡುವವರಿಗೆ ಮತ ಹಾಕಿ ಎಂದು ಮನವಿ ಮಾಡಿದರು.

ಬಡ ಜನರಿಗೆ ಅನುಕೂಲ ಆಗಲಿ ಅಂತ ಅನ್ನ ಭಾಗ್ಯ ಯೋಜನೆ ತಂದು 7 kg ಅಕ್ಕಿ ಕೊಟ್ಟವು. ಯಡಿಯೂರಪ್ಪ ಅದನ್ನು 5 kgಗೆ ತಂದು ನಿಲ್ಲಿಸಿದ್ದಾರೆ.ವಿಶ್ವನಾಥ್ ನೀನು ಮಾರಿಕೊಂಡು ಆ ಪಕ್ಷಕ್ಕೆ ಹೋಗಿದ್ದೀಯಲ್ಲಪ್ಪ. ನಾವು ಮತ್ತೆ ಅಧಿಕಾರಕ್ಕೆ ಬರುತ್ತೇನೆ. ಅಧಿಕಾರಕ್ಕೆ ಬಂದ್ರೆ 10kg ಅಕ್ಕಿ ಕೊಡ್ತಿವಿ ಎಂದು ಸಿದ್ಧರಾಮಯ್ಯ ಭರವಸೆ ನೀಡಿದರು.

Key words: hunsur-by election-siddaramaiah-h.vishwanath