ಪುಕ್ಕಟೆ ಅಕ್ಕಿ ಕೊಡಲು ಎಷ್ಟು ಹಣ ಇಟ್ಟಿದ್ದರು..? –ಸಿದ್ಧರಾಮಯ್ಯ ವಿರುದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ…

Promotion

ಹುಬ್ಬಳ್ಳಿ,ಅ,28,2019(www.justkannada.in):  ಹೊದಕಡೆ ಅನ್ನ ಭಾಗ್ಯ ಯೋಜನೆ ಕೊಟ್ಟೆ ಅಂತಾರೆ.ಪುಕ್ಕಟೆ ಅಕ್ಕಿ ಕೊಡಲು ಎಷ್ಟು ಹಣ ಇಟ್ಟಿದ್ದರು. ಅನ್ನಭಾಗ್ಯ ಯೋಜನೆಗಾ ನಾನೇ 800 ಕೋಟಿ ಹಣ ಹೊಂದಿಸಬೇಕಾಯಿತು ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ,  ರಾಜ್ಯ ಸರ್ಕಾರಕ್ಕೆ ಹಣದ ಕೊರತೆ ಇಲ್ಲ.  ಸಿಎಂ ಒಮ್ಮೆ ಆರ್ಥಿಕ ಸ್ಥಿತಿ ಸದೃಡವಾಗಿದೆ ಅಂತಾರೆ. ಮತ್ತೊಮ್ಮೆ  ಆರ್ಥಿಕ ಪರಿಸ್ಥಿತಿ ನನಗೆ ಮಾತ್ರ ಗೊತ್ತು ಅಂತಾರೆ.  ನನ್ನ ಪ್ರಕಾರ ರಾಜ್ಯ ಸರ್ಕಾರದ ಬಳಿ ಹಣದ ಕೊರತೆ ಇಲ್ಲ. ಆದರೆ ಸಚಿವರು ದಿನಕ್ಕೊಂದು ಹೇಳಿಕೆ ಕೊಡುತ್ತಿದ್ದಾರೆ.  ಯಾವುದೇ ಸರ್ಕಾರವಿದ್ದರೂ  ಎಲ್ಲವನ್ನ ಬಗೆ ಹರಿಸಲು ಸಾಧ್ಯವಿಲ್ಲ.  ಆದರೆ ಸರ್ಕಾರ ನೆರೆ ಸಂತ್ರಸ್ತರಿಗೆ ಬದುಕು ಕಟ್ಟಿಕೊಡಬೇಕು ಎಂದು ಸಲಹೆ ನೀಡಿದರು.

ಸಾಲಮನ್ನಾದಿಂದ ಲಕ್ಷಾಂತರ ಪ್ರಾಣ ಉಳಿದಿದೆ. ಇಲ್ಲ ಅಂದಿದ್ರೆ ಎಷ್ಟೋ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಚುನಾವಣೆ ಮಾಡಬೇಕು ಎಂಬುದು ನನ್ನ ಅಭಿಪ್ರಾಯವಲ್ಲ.  ಚುನಾವಣೆ ನಡೆದರೇ ಜನರ ಕಷ್ಟ ಬಗೆಹರಿಯಲ್ಲ. ರಾಜಕಾರಣಿಗಳು ಜನರ ಸಮಸ್ಯೆ ಕಡೆ ಗಮನ ಹರಿಸಲ್ಲ. ಹೀಗಾಗಿ  ಜನರ ಕಷ್ಟ ನೋಡಿ ಮಧ್ಯಂತರ ಚುನಾವಣೆ ಬರೋದು ಬೇಡ ಅಂದುಕೊಂಡಿದ್ದೇನೆ ಎಂದರು.

ಹಾಗೆಯೇ ಐಎಂಎ, ಪೋನ್ ಟ್ಯಾಪಿಂಗ್ ತನಿಖೆಗೆ ಹೆದರಲ್ಲ.  ನನ್ನನ್ನ ಉಳಿಸ್ರಪ್ಪ ಎಂದು ಯಾರನ್ನೂ ಭಿಕ್ಷೆ ಬೇಡಲ್ಲ.  ಇದು ನನ್ನ ರಾಜಕೀಯ ಜಾಯಮಾನ ಅಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

Key words: hubli-Former CM- HD Kumaraswamy- outrage-against -Siddaramaiah