ಲಕ್ಷ್ಮಣ್ ಸವದಿ ಇನ್ನೊಮ್ಮೆ ಸೋತರೇ ಸಿಎಂ ಆಗ್ತಾರೆ- ಮಾಜಿ ಸಚಿವ ಶಿವರಾಜ್ ತಂಗಡಗಿ ಟಾಂಗ್…

ಕೊಪ್ಪಳ,ಅ,28,2019(www.justkannada.in):  ಲಕ್ಷ್ಮಣ್ ಸವದಿ ಇನ್ನೊಮ್ಮೆ ಸೋತರೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಟಾಂಗ್ ನೀಡಿದ್ದಾರೆ.

ಶಿವರಾಜ್ ತಂಗಡಗಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದ ಡಿಸಿಎಂ ಲಕ್ಷ್ಮಣ್ ಸವದಿಗೆ ಕೊಪ್ಪಳದಲ್ಲಿ ಇಂದು ತಿರುಗೇಟು ನೀಡಿರುವ ಮಾಜಿ ಸಚಿವ ಶಿವರಾಜ್ ತಂಗಡಗಿ, ಲಕ್ಷ್ಮಣ್ ಸವದಿ ಒಮ್ಮೆ ಸೋತಿದ್ದಕ್ಕೆ ಉಪಮುಖ್ಯಮಂತ್ರಿಯಾಗಿದ್ದಾರೆ. ಇನ್ನೊಮ್ಮೆ ಸೋತರೆ ರಾಜ್ಯದ ಮುಖ್ಯಮಂತ್ರಿಯಾಗ್ತಾರೆ ಎಂದು ವ್ಯಂಗ್ಯವಾಡಿದರು.

ಇನ್ನು ಪರಿಹಾರ ತಗೊಂಡು ಬನ್ನಿ ಬ್ಯಾನರ್ ಹಾಕಿಸಿ ಸ್ವಾಗತ ಕೋರುವೆ. ಅದು ಬಿಟ್ಟು ಕಾಲಹರಣ ಮಾಡುವುದು ಸರಿಯಲ್ಲ ಎಂದು ಶಿವರಾಜ್ ತಂಗಡಗಿ ಲಕ್ಷ್ಮಣ್ ಸವದಿಗೆ ಸವಾಲು ಹಾಕಿದ್ದಾರೆ.

Key words: Laxman Savadi –lose- CM-  Former Minister -Shivraj Thangadagi