ರೈಲಿನಿಂದ ಬಿದ್ದು ಬಿಬಿಎಂಪಿ ಸುಪರಿಟೆಂಡೆಂಟ್ ಇಂಜಿನಿಯರ್ ಸಾವು.

Promotion

ಹುಬ್ಬಳ್ಳಿ,ಡಿಸೆಂಬರ್,20,2021(www.justkannada.in): ರೈಲು ಚಲಿಸುವಾಗ ಇಳಿಯಲು ಹೋಗಿ ರೈಲಿನಿಂದ ಬಿದ್ದು ಬಿಬಿಎಂಪಿ ಸುಪರಿಟೆಂಡೆಂಟ್ ಇಂಜಿನಿಯರ್ ಸಾವನ್ನಪ್ಪಿರುವ ಘಟನೆ  ಹುಬ್ಬಳ್ಳಿಯಲ್ಲಿ ನಡೆದಿದೆ.

ರಂಗರಾಜು ಎಸ್ ಎ (59) ಸಾವನ್ನಪ್ಪಿದ ಸೂಪರಿಂಟೆಂಡೆಂಟ್ ಇಂಜಿನಿಯರ್. ಭಾನುವಾರ ರಾತ್ರಿ 11:30 ರ ಸುಮಾರಿಗೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ರಂಗರಾಜು ಎಸ್ ಎ ಬಿಬಿಎಂಪಿಯ ಕೆ ಆರ್ ಐ ಡಿ ಎಲ್ ವಿಭಾಗದಲ್ಲಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.

ಈ ಮಧ್ಯೆ ರಂಗರಾಜು ಭಾನುವಾರ ರಾತ್ರಿ 11:30 ರ ವೇಳೆ ಹುಬ್ಬಳ್ಳಿ – ಬೆಂಗಳೂರು ರೈಲಿಗೆ ಹತ್ತಬೇಕಿತ್ತು, ಆದರೆ ಬೆಳಗಾವಿ ಬೆಂಗಳೂರು ರೈಲಿಗೆ ಹತ್ತಿರುವುದು ಗೊತ್ತಾಗಿದೆ, ರೈಲು ಚಲಿಸುತ್ತಿರುವಾಗ ರೈಲಿನಿಂದ ಇಳಿಯುವ ಸಂದರ್ಭದಲ್ಲಿ ಪ್ಲಾಟ್ ಫಾರ್ಂ ನಲ್ಲಿ ಬಿದ್ದು ರಂಗರಾಜು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ರಂಗರಾಜು ಪತ್ನಿ, ಓರ್ವ ಪುತ್ರ,ಓರ್ವ ಪುತ್ರಿಯನ್ನು ಅಗಲಿದ್ದಾರೆ.

Key words: hubli-Death -BBMP -Superintendent Engineer-train