ಕ್ರೇಜಿಸ್ಟಾರ್’ಗೆ ಗೌರವ ಡಾಕ್ಟರೇಟ್ ಪ್ರದಾನ

Promotion

ಬೆಂಗಳೂರು, ನವೆಂಬರ್ 04, 2019 (www.justkannada.in): ನಟ, ನಿರ್ದೇಶಕ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರ ಕಲಾ ಸೇವೆಯನ್ನು ಗುರುತಿಸಿ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

30 ವರ್ಷಕ್ಕೂ ಅಧಿಕ ಕಾಲದ ಕಲಾ ಸೇವೆಯನ್ನು ಗುರುತಿಸಿ, 30 ವರ್ಷಕ್ಕೂ ಅಧಿಕ ಕಾಲ ಕಲಾ ಸೇವೆಗೆ ಈ ಗೌರವ ಸಂದಿದೆ. ನಟ, ನಿರ್ದೇಶನ, ನಿರ್ಮಾಣ ಮಾತ್ರವಲ್ಲದೆ ಸಂಗೀತ, ಸಾಹಿತ್ಯ, ಸಾಹಸ, ವಿತರಣೆ, ಸಂಕಲನ.. ಸೇರಿದಂತೆ ಅನೇಕ ವಿಭಾಗಗಳಲ್ಲೂ ಕೆಲಸ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ.

ಇವರಿಗೆ ಗೌರವ ಡಾಕ್ಟರೇಟ್ ದೊರಕಿರುವುದು ಅಭಿಮಾನಿಗಳಿಗೂ ಸೇರಿದಂತೆ ಚಿತ್ರತಂಗದವರಿಗೂ ಖುಷಿ ಕೊಟ್ಟಿದೆ. ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.