ರಾಜ್ಯೋತ್ಸವಕ್ಕೆ ಕನ್ನಡದಲ್ಲಿ ಹಾಲಿವುಡ್’ನ ‘ಟರ್ವಿುನೇಟರ್: ಡಾರ್ಕ್ ಫೇಟ್’ ಚಿತ್ರ ರಿಲೀಸ್

Promotion

ಬೆಂಗಳೂರು, ಅಕ್ಟೋಬರ್ 23, 2019 (www.justkannada.in): ಹಾಲಿವುಡ್ ‘ಟರ್ವಿುನೇಟರ್: ಡಾರ್ಕ್ ಫೇಟ್’ ಚಿತ್ರ ಕನ್ನಡ ಭಾಷೆಯಲ್ಲೂ ತೆರೆಗೆ ಬರಲಿದೆ.

ಚಿತ್ರವು ನವೆಂಬರ್ 1 ಕರ್ನಾಟಕ ರಾಜ್ಯೋತ್ಸವದಂದು ರಿಲೀಸ್ ಆಗುತ್ತಿದೆ.
ಈ ಚಿತ್ರದ ಟ್ರೈಲರ್ ಅನ್ನು ಕಿಚ್ಚ ಸುದೀಪ್ ತಮ್ಮ ಟ್ವಿಟರ್ ಖಾತೆಯಲ್ಲಿ ರಿಲೀಸ್ ಮಾಡಿ ಶುಭ ಹಾರೈಸಿದ್ದರು.

ಇದೀಗ ಈ ಟ್ರೈಲರ್ ಗೆ ವ್ಯಾಪಕ ಮೆಚ್ಚುಗೆ ಸಿಗುತ್ತಿದ್ದು, ಟ್ರೈಲರ್ ನೋಡಿದವರು ಒಳ್ಳೆಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.