ಹಿಂದುತ್ವ ಅವರಪ್ಪನ ಮನೆಯ ಆಸ್ತಿಯಾ..?  ನಾನೇನು ಹಿಂದೂ ಅಲ್ವೇನ್ರಿ..? ಬಿಜೆಪಿ ವಿರುದ್ದ ಡಿಕೆ ಶಿವಕುಮಾರ್ ವಾಗ್ದಾಳಿ.

Promotion

ಬೆಂಗಳೂರು,ಆಗಸ್ಟ್,20,2022(www.justkannada.in):     ಕಾಂಗ್ರೆಸ್ ಹಿಂದುತ್ವ ಒಪ್ಪಿಕೊಳ್ಳಲಿ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್,  ಹಿಂದುತ್ವ ಅವರಪ್ಪನ ಮನೆಯ ಆಸ್ತಿಯಾ..?  ನಾವೇನು ಹಿಂದೂ ಅಲ್ವೇನ್ರಿ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್,  25 ವರ್ಷದ ಹಿಂದೆ ಸೋನಿಯಾ ಗಾಂಧಿ ಮನೆಗೆ ಹೋಗಿದ್ವಿ. ಅಂದು ಸೋನಿಯಾ ಗಾಂಧಿ  ಅವರು ಯುಗಾದಿ ಹಬ್ಬ ಮಾಡಿದ್ರು. ನನಗೆ ಶಿವನ ಮಗ ಕುಮಾರ ಎಂದು ಹೆಸರಿಟ್ಟಿದ್ದಾರೆ. ಸಿದ‍್ಧರಾಮಯ್ಯಗೆ ರಾಮನ ಹೆಸರಿಟ್ಟಿದ್ದಾರೆ. ನಾವು ಏನಾದ್ರೂ ಕಲ್ಲು ಮಣ್ಣು ಅಂತಾ ಹೆಸರು ಇಟ್ಟಿಕೊಂಡಿದ್ದೀವಾ ಎಂದು ಟಾಂಗ್ ನೀಡಿದರು.

ರಂಭಾಪುರಿ ಮಠದಲ್ಲಿ ಸಿದ‍್ಧರಾಮಯ್ಯ ಪಶ್ಚಾತಾಪ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ,  ಮನುಷ್ಯ ತಪ್ಪು ಮಾಡಿದ್ರೆ ಒಪ್ಪಿಕೊಳ್ಳಬೇಕು. ತಪ್ಪು ಮಾಡಿದ್ರೆ ಒಪ್ಪಿಕೊಳ್ಳುವುದರಲ್ಲಿ ತಪ್ಪಿಲ್ಲ. ನಾವ್ಯಾರು ದೇವರು ಅಲ್ಲ. ತಪ್ಪು ಮಾಡಿದ್ದಾಗ ದೇವರು ಕೂಡ ಒಪ್ಪಿಕೊಂಡಿದ್ದಾರೆ.  ನಾನು ಸಂಪುಟದಲ್ಲಿದ್ದಾಗ ಪ್ರತ್ಯೇಕ ಧರ್ಮ ವಿರೋಧಿಸಿದ್ದೆ. ಧರ್ಮದ ವಿಚಾರದಲ್ಲಿ ಕೈಹಾಕಬಾರದು ಅಂದಿದ್ದೆ.  ಬಳಿಕ ಕ್ಷಮೆಯೂ ಕೇಳಿದ್ದೆ.  ನಿನ್ನೆ ಶ್ರೀಗಳು ಮತ್ತು  ಸಿದ್ಧರಾಮಯ್ಯ ನಡುವಿನ ಮಾತುಕತೆ ಬಗ್ಗೆ ಗೊತ್ತಿಲ್ಲ ಎಂದರು.

Key words:  Hindutva – property -DK Shivakumar -against -BJP.