ಹಿಜಾಬ್ ವಿವಾದ ಕುರಿತು ಹೈಕೋರ್ಟ್ ನಲ್ಲಿ ವಾದ –ಪ್ರತಿವಾದ : ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿಕೆ.

ಬೆಂಗಳೂರು,ಫೆಬ್ರವರಿ,8,2022(www.justkannada.in):  ರಾಜ್ಯದಲ್ಲಿ  ಸಾಕಷ್ಟು ಸದ್ಧು ಮಾಡುತ್ತಿರುವ ಹಿಜಾಬ್-ಕೇಸರಿ ಶಾಲು ವಿವಾದ ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದು ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಕೋರಿ ವಿದ್ಯಾರ್ಥಿಗಳು ಸಲ್ಲಿಸಲಾಗಿರುವ  ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ.

ಹೈಕೊರ್ಟ್ ನ ಏಕಸದಸ್ಯ ಪೀಠ ವಿಚಾರಣೆ ನಡೆಸುತ್ತಿದ್ದು ವಾದ ಪ್ರತಿವಾದಗಳು ನಡೆಯುತ್ತಿವೆ. ಈ ಮಧ್ಯೆ  ವಿಚಾರಣೆಯನ್ನು ಹೈಕೋರ್ಟ್ ಮಧ್ಯಾಹ್ನ 2.30 ಕ್ಕೆ ಮುಂದೂಡಿದೆ. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ದೇವದತ್ ಕಾಮತ್, ಹಿಜಾಬ್ ಇಸ್ಲಾಂನ ಅತ್ಯಗತ್ಯ ಆಚರಣೆ. ಪವಿತ್ರ ಕುರಾನ್ ನಲ್ಲಿ ಹೀಗೆಂದು ಉಲ್ಲೇಖವಾಗಿದೆ. ಸಂವಿಧಾನದ 19(1) A ಅಡಿ ಇಚ್ಚೆಯ ಬಟ್ಟೆ ಧರಿಸುವುದು ಹಕ್ಕು. ಧರ್ಮ ಪಾಲನೆ ಜನರ ಮೂಲಭೂತ ಹಕ್ಕು.

ಹಿಜಾಬ್ ಕೂದಲು ಕುತ್ತಿಗೆ ಮುಚ್ಚಬೇಕು. ಕೈ, ಮುಖ ಬಿಟ್ಟು ಉಳಿದುದನ್ನು ಅಪರಿಚಿತರಿಗೆ ತೋರಿಸಬಾರದು ಎಂದು ಖುರಾನ್ ನಲ್ಲಿ ಉಲ್ಲೇಖವಾಗಿದೆ. ಎಂದು ಅರ್ಜಿ ಹೈಕೋರ್ಟ್ ಗೆ  ಮಾಹಿತಿ ನೀಡಿದರು. ವಿಚಾರಣೆಯನ್ನ ಮಧ್ಯಾಹ್ನಕ್ಕೆ ಮುಂದೂಡಲಾಗಿದೆ.

Key words: hijab-high court-hearing