ಹಿಜಾಬ್ ವಿವಾದಕ್ಕೆ ಕಾಂಗ್ರೆಸ್ ಬಿಜೆಪಿ ಪಕ್ಷಗಳೇ ಕಾರಣ- ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ.

ಬೆಂಗಳೂರು,ಫೆಬ್ರವರಿ,9,2022(www.justkannada.in):  ಹಿಜಾಬ್ ವಿವಾದಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೇ ಕಾರಣ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಗುಡುಗಿದ್ದಾರೆ.

ಈ ಕುರಿತು ನವದೆಹಲಿಯಲ್ಲಿ ಮಾತನಾಡಿದ ಹೆಚ್.ಡಿ ದೇವೇಗೌಡರು, ಇದರಲ್ಲಿ ಯಾವುದೇ ಅನುಮಾನ ಇಲ್ಲ. ಹಿಜಾಬ್ ವಿವಾದಕ್ಕೆ ಈ ಎರಡು ಪಕ್ಷಗಳೇ ಕಾರಣ ಪ್ರಕರಣ  ವಿಸ್ತೃತ ಪೀಠಕ್ಕೆ ಹೋಗಿದೆ ಅಂದ್ರೆ ಗಂಭೀರವಾಗಿ ಪರಿಗಣಿಸಿದೆ.  ಸರ್ಕಾರ ಈ ವಿವಾದ ಹತ್ತಿಕ್ಕಬಹುದಿತ್ತು ಆದರೆ ಮಾಡಿಲ್ಲ. ಸರ್ಕಾರಕ್ಕೆ  ಮೊದಲೇ ಮಾಹಿತಿ ತಿಳಿದಿರುತ್ತದೆ. ಆದೆರೆ ಯಾಕೆ ಹೀಗಾಯಿತು.Siddaramaiah- should go - national politics-former PM-HD Deve Gowda

ವಿವಾದ ನಡೆಯಲಿ ಎಂದು ಬಿಜೆಪಿ ಸರ್ಕಾರ ಬಿಟ್ಟಿದೆ.  ಬಿಜೆಪಿ ಸರ್ಕಾರವೇ ಈ ವಿವಾದ ಹಬ್ಬಲು ಬಿಟ್ಟಿದೆ.  ಎಲ್ಲಗೆ ಬಂದಿದೆ ನಮ್ಮ ರಾಜ್ಯ. ಎರಡೂ ಪಕ್ಷದ ನಾಯಕರು ಜನರನ್ನ ಪ್ರಚೋದಿಸುತ್ತಿದ್ದಾರೆ ಎಂದು ಹೆಚ್.ಡಿ ದೇವೇಗೌಡರು ಕಿಡಿಕಾರಿದರು.

Key words: hijab-congress-bjp-former PM-HD devegowda