ಹಿಜಾಬ್ ವಿವಾದ ವಿಸ್ತೃತ ಪೀಠಕ್ಕೆ ವರ್ಗಾವಣೆ  ಮಾಡಿದ ಹೈಕೋರ್ಟ್

ಬೆಂಗಳೂರು,ಫೆಬ್ರವರಿ,9,2022(www.justkannada.in):  ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಕೋರಿ ಸಲ್ಲಿಸಲಾಗಿದ್ಧ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಿತು. ಈ ಮಧ್ಯೆ ಹಿಜಾಬ್ ವಿವಾದವನ್ನ ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.

ಹಿಜಾಬ್ ವಿವಾದ ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಿದ ಹೈಕೋರ್ಟ್  ನ್ಯಾ.ಕೃಷ್ಣಾ ದೀಕ್ಷಿತ್ ಅವರು,  ಈ ಪ್ರಕರಣ ವಿಸ್ತೃತ ಪೀಠದಲ್ಲಿ ವಿಚಾರಣೆಗೆ ಯೋಗ್ಯವಾಗಿದೆ. ಈ ಪ್ರಕರಭದಲ್ಲಿ ಆನೇಕ ಮುಖ್ಯ ಪ್ರಶ್ನೆಗಳು ಎದ್ದಿವೆ. ವಿಸ್ತೃತ ಪೀಠ ರಚನೆ ಮುಖ್ಯನ್ಯಾಯಾಮೂರ್ತಿಗಳು ನಿರ್ಧರಿಸಲಿ. ವಿಸ್ತೃತ ಪೀಠ ರಚಿಸುವ ಅಧಿಕಾರ ಮುಖ್ಯನ್ಯಾಯಾಮೂರ್ತಿಗಳಿಗಿದೆ. ಮಧ್ಯಂತರ ಆದೇಶವನ್ನೂ ವಿಭಾಗೀಯ ಪೀಠವೇ ನೀಡಲಿ ಎಂದಿದ್ದಾರೆ.

ಅಲ್ಲದೆ ಎಲ್ಲಾ ಕಡತಗಳನ್ನ ಮುಖ್ಯನ್ಯಾಯಮೂರ್ತಿಗಳಿಗೆ ವರ್ಗಾಹಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಗೆ ನ್ಯಾ ಕೃಷ್ಣಾದೀಕ್ಷಿತ್ ನಿರ್ದೇಶಿಸಿದರು. ಈ ನಡುವೆ ಅರ್ಜಿದಾರರು ಮುಂದಿನ ವಿಚಾರಣೆಯಲ್ಲಿ ಮಧ್ಯಂತರ ಆದೇಶಕ್ಕೆ ಮನವಿ ಸಲ್ಲಿಸಬಹುದು ಎಂದಿದ್ದಾರೆ.

Key words: high court-hijab-case-hearing