ಜಿಲ್ಲಾ ಕೇಂದ್ರದಲ್ಲಿ ಶೀಘ್ರವೇ ಹೈಟೆಕ್ ಡಯಾಗ್ನಾಸ್ಟಿಕ್‌ ಕೇಂದ್ರ ಆರಂಭ- ಡಿಸಿಎಂ ಅಶ್ವಥ್ ನಾರಾಯಣ್.

ರಾಮನಗರ,ಜುಲೈ,19,2021(www.justkannada.in):  ಟೋಯೊಟಾ ಕಿರ್ಲೋಸ್ಕರ್‌ ಕಂಪನಿಯು ಕೊಡುಗೆಯಾಗಿ ನೀಡಿರುವ ಅತ್ಯಾಧುನಿಕ ಸಿಟಿ ಸ್ಕ್ಯಾನ್‌ ಯಂತ್ರವನ್ನು ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಅಳವಡಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ್ ಅವರು ಸೋಮವಾರ ಲೋಕಾರ್ಪಣೆ ಮಾಡಿದರು.jk

ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, “ಈಗಾಗಲೇ ರಾಮನಗರ ಜಿಲ್ಲಾಸ್ಪತ್ರೆಯನ್ನು ತಾಂತ್ರಿಕವಾಗಿ ಸಾಕಷ್ಟು ಅಭಿವೃದ್ಧಿಪಡಿಸಲಾಗಿದೆ. ಇದಕ್ಕೆ ಹೊಸ ಸೇರ್ಪಡೆ ಸಿಟಿ ಸ್ಕ್ಯಾನ್‌ ಯಂತ್ರ. ಇದನ್ನು ತನ್ನ ಸಿಎಸ್‌ಆರ್‌ ನಿಧಿಯಡಿ ಕೊಡುಗೆಯಾಗಿ ನೀಡಿರುವ ಟೋಯೊಟಾ ಕಿರ್ಲೋಸ್ಕರ್‌ ಕಂಪನಿಯನ್ನು ಅಭಿನಂಧಿಸುವೆ” ಎಂದರು.

ಹೈಟೆಕ್ ಡಯಾಗ್ನಾಸ್ಟಿಕ್‌ ಕೇಂದ್ರ

ರಾಮನಗರ ಜಿಲ್ಲಾ ಕೇಂದ್ರದಲ್ಲಿ ‌ಎಲ್ಲ ಕಾಯಿಲೆಗಳನ್ನು ಪತ್ತೆ ಹಚ್ಚಬಲ್ಲ ಹೈಟೆಕ್ ಡಯಾಗ್ನಾಸ್ಟಿಕ್‌ ಕೇಂದ್ರವನ್ನು ಸ್ಥಾಪನೆ ಮಾಡಲು ಉದ್ದೇಶಿಸಿಲಾಗಿದೆ. ಜಿಲ್ಲೆಯ ಜನರು ಆರೋಗ್ಯ ಪರೀಕ್ಷೆಗಾಗಿ ಬೆಂಗಳೂರಿಗೆ ಹೋಗಬೇಕಾಗಿಲ್ಲ. ಇಲ್ಲಿಯೇ ಪರೀಕ್ಷೆ ಮಾಡಿಸಿಕೊಂಡು ಇಲ್ಲಿಯೇ ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ಮಾಡಲಾಗುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ್  ಹೇಳಿದರು.

ಇದಕ್ಕೆ ಪೂರಕವಾಗಿ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆ ಸೇರಿದಂತೆ ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ರಾಮನಗರ ಜಿಲ್ಲೆಯೂ ಆರೋಗ್ಯ ಮೂಲಭೂತ ಕ್ಷೇತ್ರದಲ್ಲಿ ಅತ್ಯುತ್ತಮ ಜಿಲ್ಲೆಯಾಗಿ ಹೊರಹೊಮ್ಮಲಿದೆ ಎಂದು ಅವರು ಹೇಳಿದರು.

ಇದರ ಜತೆಗೆ ಜಿಲ್ಲೆಯಲ್ಲಿ ಶಿಕ್ಷಣ, ಮೂಲಸೌಕರ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ, ಜಲಜೀವನ್‌ ಮಿಷನ್‌ ಮೂಲಕ ಪ್ರತಿ ಮನೆಗೂ ನದಿಮೂಲದಿಂದ ಶುದ್ಧ ಕುಡಿಯುವ ನೀರನ್ನು ಒದಗಸಿಲಾಗುತ್ತಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದರು.

ಈ ಸಂದರ್ಭದಲ್ಲಿ ಮಾಗಡಿ ಶಾಸಕ ಮಂಜುನಾಥ್‌, ಟೋಯೊಟಾ ಕಿರ್ಲೋಸ್ಕರ್‌ ಕಂಪನಿಯ ಹಿರಿಯ ಉಪಾಧ್ಯಕ್ಷ ವಿಕ್ರಂ ಗುಲಾಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲವಾಡಿ ದೇವರಾಜ್‌, ಜಿಲ್ಲಾಧಿಕಾರಿ, ಜಿಲ್ಲೆಯ ಹಿರಿಯ ಅಧಿಕಾರಿಗಳು,  ಹಾಗೂ ಆಸ್ಪತ್ರೆಯ ವೈದ್ಯರು ಹಾಜರಿದ್ದರು.

ENGLISH SUMMARY

DyCM says Bengaluru University Complex will be set up in the town of Ramanagara

TKM provides CT Scanner to Covid Care Center in Ramanagara district hospital

Ramanagara:, Toyota Kirloskar Motor (TKM) handed over a CT Scanner to the authorities at the Ramanagara District Hospital in the presence of DyCM and District Incharge Minister Dr. C N Ashwatha Narayana, on Monday.

Narayana, also the State Covid task force head, who was present on the occasion said, the CT Scanner which has been installed with all the required hardware and software components at the new COVID care center in Ramanagara District Hospital facilitates speedy diagnosis and with this critical patients need not travel far for a CT scan.

He further told, TKM has been constantly complimenting the GoK’s efforts to expand the healthcare facilities quickly, particularly for those people from the rural parts of the state, and expressed his gratitude for the helping hand extended by the company.

Narayana also stated that measures will be taken in a speedy manner to set up a Bangalore University Complex in the town and with regard to the shifting of Rajiv Gandhi Health University Administrative Center to Ramanagara, he said, actions will be taken up after the appointment of a new vice-chancellor.

Vikram Gulati, Senior Vice President, Corporate Affairs and Governance, TKM, said, “the company is committed to extending all possible help to the local communities as per their emerging needs by joining hands with the Government for better impact.”

TKM has handed over 130 oxygen concentrators to the GoK and provided Ambu bags, monitors, oximeters, glucometers, masks, sanitizers, and other essential materials to the District Health Office of Ramanagara for their immediate requirements. It also extended help to ensure maximum reach of the vaccination drive by enabling transportation facility for the Health Department of Ramanagara District, he informed.

Further, TKM is setting up an oxygen generating plant at Community Health Centre (CHC) in Bidadi, near Bangalore. The company is also supporting the construction of a modern CHC at Bidadi to benefit the local communities, he stated.

Key words: High-tech- Diagnostic Center –Ramanagar- DCM -Ashwath Narayan