ಮೈಸೂರು ದಸರಾ-2021 ಆಚರಣೆ ಸಂಬಂಧ ಸೆ.3 ರಂದು ಉನ್ನತ ಮಟ್ಟದ ಸಭೆ.

Promotion

ಮೈಸೂರು,ಆಗಸ್ಟ್,28,2021(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ-2021 ಆಚರಣೆ ಸಂಬಂಧ ಪೂರ್ವಭಾವಿಯಾಗಿ ಚರ್ಚಿಸಲು ಸೆಪ್ಟಂಬರ್ 3 ರಂದು ಉನ್ನತ ಮಟ್ಟದ ಸಭೆಯನ್ನ ಆಯೋಜಿಸಲಾಗಿದೆ.

ವಿಧಾನಸೌಧಧ ಸಮ್ಮೇಳನ ಸಭಾಂಗಣದಲ್ಲಿ ಸೆಪ್ಟಂಬರ್ 3 ರ ಸಂಜೆ 4 ಗಂಟೆಗೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದ್ದು ದಸರಾ ಆಚರಣೆ ಸಂಬಂಧ ಚರ್ಚೆ ನಡೆಸಲಿದ್ದಾರೆ.

ಕೊರೋನಾ ಭೀತಿ ಹಿನ್ನೆಲೆ ಕಳೆದ ಬಾರಿ ಸರಳ,ಸಾಂಪ್ರದಾಯಿಕ ದಸರ ಆಚರಣೆ ಮಾಡಲಾಗಿತ್ತು. ಇನ್ನು ಇದೀಗ ಕೋವಿಡ್ 3ನೇ ಅಲೆ ಭೀತಿ ಎದುರಾಗಿದ್ದು ಈ ಬಾರಿಯೂ ಸರಳ ದಸರಾ ಆಚರಣೆಯೂ ಏನೆಂಬುದು ನಿರ್ಧಾರವಾಗಲಿದೆ.

Key words: High-level -meeting – Mysore Dasara-2021- celebration –sep 4