ಕರ್ನಾಟಕ ರಾಜ್ಯ ವಿಪ್ರ ಫೋಟೋ ಮತ್ತು ವೀಡಿಯೋಗ್ರಾಫರ್‌ ಅಸೋಸಿಯೇಷನ್  ಉದ್ಘಾಟನೆ: ಹಿರಿಯ ಛಾಯಾಗ್ರಾಹಕರಿಗೆ ಸನ್ಮಾನ.

ಮೈಸೂರು,ಆಗಸ್ಟ್,28,2021(www.justkannada.in): ಕರ್ನಾಟಕ ರಾಜ್ಯ ವಿಪ್ರ ಫೋಟೋ ಮತ್ತು ವೀಡಿಯೋಗ್ರಾಫರ್‌ ಅಸೋಸಿಯೇಷನ್  ಉದ್ಘಾಟನಾ ಕಾರ್ಯಕ್ರಮ ಹಾಗೂ ವಿಶ್ವ ಛಾಯಾಗ್ರಾಹಕರ ದಿನಾಚರಣೆ, ಛಾಯಾಗ್ರಹಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಛಾಯಾಗ್ರಾಹಕರಿಗೆ ಸನ್ಮಾನ ಕಾರ್ಯಕ್ರಮವನ್ನು ಗವಿಪುರಂನ ಉದಯಭಾನು ಕಲಾ ಸಂಘದಲ್ಲಿ ಹಮ್ಮಿಕೊಳ್ಳಲಾಗಿತ್ತು.

ದೀಪ ಬೆಳಗಿಸಿ, ಕಾರ್ಯಕ್ರಮವನ್ನು ಶ್ರೀ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥರು, ವಿದ್ವಾನ್ ಶ್ರೀ ಸತ್ಯಧ್ಯಾನಾಚಾರ್ಯ ಕಟ್ಟಿ, ವ್ಯವಸ್ಥಾಪಕರು, ಶ್ರೀ ಉತ್ತರಾದಿ ಮಠ, ಶಾಸಕ ಉದಯ ಗರುಡಾಚಾರ್, ರವಿ ಸುಬ್ರಮಣ್ಯ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷರಾದ ಲಕ್ಷ್ಮೀಕಾಂತ್, ಹಾಗೂ ಕೆ. ಮೋಹನ್, ಹಿರಿಯ ಪತ್ರಕರ್ತರಾದ ವೆಂಕಟನಾರಾಯಣ್, ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಅಧ್ಯಕ್ಷರಾದ ಡಾ|| ಮುರಳೀಧರ್, ಸಂಘದ ಅಧ್ಯಕ್ಷರಾದ ಬಿ.ಕೆ. ರಮೇಶ್‌ರವರು ಕ್ಯಾಮೆರಾಗಳಿಂದ ಕ್ಲಿಕ್ಕಿಸುವ ಮೂಲಕ ಉದ್ಘಾಟನೆ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ವಿಶ್ವಪ್ರಸನ್ನ ತೀರ್ಥರು ಸ್ವಾಮೀಜಿಗಳು, ಸಂಘಟನೆ ಇದ್ದಾಗ ಸಮಾಜ ಅಭಿವೃದ್ದಿ ಸಾಧ್ಯ .ಧಾರ್ಮಿಕ ,ಸಂಸ್ಕೃತಿ ,ಸಂಪ್ರಾದಯಗಳನ್ನು ಮರೆಯಬಾರದು .ಯಾವುದೇ ವೃತ್ತಿ ಮೇಲು ,ಕೀಳು ಇಲ್ಲ .ಶ್ರದ್ದೆ ಭಕ್ತಿ ಇಂದ ಶ್ರೀ ಕೃಷ್ಣ ನೆನದು ಕಾರ್ಯ ನಿರ್ವಹಿಸಿ ಯಶ್ವಸಿ ಫಲ ಸಿಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಘಟನೆಯ ಅಧ್ಯಕ್ಷ  ರಮೇಶ್ ಬಿ.ಕೆ., ಉಪಾಧ್ಯಕ್ಷರಾದ ಪ್ರಸನ್ನ ವಿ. ಕುಲಕರ್ಣಿ, ಕಾರ್ಯದರ್ಶಿ ಶ್ರೀನಿವಾಸ್ ವೈ.ಕೆ., ಖಜಾಂಚಿ ರಘು ಎಸ್, ನಿರ್ದೇಶಕರಾದ ಆರ್‌.ಜಿ. ಭಟ್, ಗುರುಪ್ರಸಾದ್ ಎಸ್, ಪ್ರದೀಪ್‌ ಬಿ.ಆರ್. ಪಾಲ್ಗೊಂಡಿದ್ದರು.

ನಾಡಿನ ಹಿರಿಯ ಛಾಯಾಗ್ರಾಹಕರುಗಳಾದ ಬಿ.ಕೆ. ಸುಬ್ಬರಾವ್, ಮೈಸೂರು, ಶ್ರೀನಿವಾಸರಾವ್, ಬೆಂಗಳೂರು, ಸಂದೀಪ್ ಹೊಳ್ಳ, ಉಜಿರೆ, ಬಾಬು ಜಿ.ಎಸ್, ಮೈಸೂರು, ಕೆಂಗಲ್ ವೆಂಕಟೇಶ್, ಸಿಂಧನೂರು, ಸತೀಶ್, ಬೆಂಗಳೂರು ಸಾಧನೆಯನ್ನು ಗುರುತಿಸಿ, ಸನ್ಮಾನಿಸಿ ಗೌರವಿಸಲಾಯಿತು.

Key words: Inauguration -Karnataka State Photo and Videographer Association-senior photographers.