ಸಚಿವ ಸ್ಥಾನಕ್ಕೆ ಅಂಟಿಕೊಂಡು ಕೂತಿಲ್ಲ: ಹೈಕಮಾಂಡ್ ಹೇಳಿದ್ರೆ ಲೋಕಸಭೆ ಚುನಾವಣೆಗೆ ಸ್ಪರ್ಧೆ- ಕೆ.ಎನ್ ರಾಜಣ್ಣ.

Promotion

ಬೆಂಗಳೂರು, ಅಕ್ಟೋಬರ್​​,9,2023(www.justkannada.in):  ನಾನು ಸಚಿವ ಸ್ಥಾನಕ್ಕೆ ಅಂಟಿಕೊಂಡು ಕೂತಿಲ್ಲ. ಹೈಕಮಾಂಡ್ ಹೇಳಿದ್ರೆ ಲೋಕಸಭೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ, ಹೈಕಮಾಂಡ್ ಹೇಳಿದರೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವೆ. ಯಾರು ಏನೇ ಹೇಳಿದರೂ ತೀರ್ಮಾನ ಮಾಡುವುದು ಹೈಕಮಾಂಡ್. ಕ್ಯಾಬಿನೆಟ್ ಪುನರ್​ ರಚನೆ ಬಗ್ಗೆ ತೀರ್ಮಾನ ಮಾಡುವವರು ಅವರೇ. ನಾನು ಕೂಡ ಹೈಕಮಾಂಡ್ ಹೇಳಿದಂತೆ ಮಾಡುತ್ತೇನೆ ಎಂದರು.

ಡಿ.ಕೆ.ಶಿವಕುಮಾರ್​​ ಮತ್ತೆ ತಿಹಾರ್  ಜೈಲಿಗೆ ಹೋಗುತ್ತಾರೆ ಎಂಬ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹೇಳಿಕೆ ತಿರುಗೇಟು ನೀಡಿದ ಸಚಿವ ಕೆ.ಎನ್ ರಾಜಣ್ಣ,  ಡಿಕೆ ಶಿವಕುಮಾರ್​​ ರನ್ನು ಜೈಲಿಗೆ ಹಾಕಿಸುವುದಕ್ಕೆ ಕುಮಾರಸ್ವಾಮಿ ನ್ಯಾಯಾಧೀಶರಲ್ಲ. ಒಂದು ವೇಳೆ ಅವರು ನ್ಯಾಯಾಧೀಶರಾಗಿದ್ದರೆ ಒಪ್ಪಿಕೊಳ್ಳೋಣ ಎಂದು ಕಿಡಿಕಾರಿದರು.

Key words: high command – contest – Lok Sabha  election-minister-KN Rajanna