ಮಾಜಿ ಸಚಿವ ವಿ.ಸೋಮಣ್ಣರಿಗೆ ಅನ್ಯಾಯ ಆಗಿದೆ ನಿಜ- ಶಾಸಕ ಮುನಿರತ್ನ.

ಬೆಂಗಳೂರು,ಅಕ್ಟೋಬರ್,9,2023(www.justkannada.in): ಸ್ವಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಚಿವ ವಿ. ಸೋಮಣ್ಣ ಪರ ಶಾಸಕ ಮುನಿರತ್ನ ಮಾತನಾಡಿದ್ದಾರೆ.

ವಿ.ಸೋಮಣ್ಣಗೆ ಅನ್ಯಾಯ ಆಗಿದೆ ನಿಜ, ಒಳ್ಳೆಯ ಹೆಸರು ಇರುವ ವ್ಯಕ್ತಿ. ಸೋಮಣ್ಣಗೆ ಎರಡು ಕ್ಷೇತ್ರದ ಬದಲು ಒಂದು ಕ್ಷೇತ್ರ ಕೊಡಬಹುದಿತ್ತು. ಸೋಮಣ್ಣಗೆ ಪಕ್ಷ ಸೂಕ್ತ ಸ್ಥಾನಮಾನ ಕೊಡುತ್ತದೆ ಎನ್ನುವ ವಿಶ್ವಾಸ ಇದೆ ಎಂದು ಶಾಸಕ ಮುನಿರತ್ನ ತಿಳಿಸಿದ್ದಾರೆ.

ಬಿಜೆಪಿ, ಜೆಡಿಎಸ್​ ಮೈತ್ರಿಗೆ ಎಸ್​ಟಿ ಸೋಮಶೇಖರ್​ ವಿರೋಧ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಮುನಿರತ್ನ, ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದಾಗ ಯಾರೂ ಮಾತಾಡಿಲ್ಲ. ಯಡಿಯೂರಪ್ಪ ಬದಲಾವಣೆ ಬಗ್ಗೆ ಕೇಳದವರು ಇಂದು ಮೈತ್ರಿ ಬಗ್ಗೆ ಏಕೆ ಕೇಳುತ್ತಾರೆ? ಹೈಕಮಾಂಡ್​ ನಮ್ಮ ಮಾತು ಕೇಳಬೇಕಿತ್ತು ಎಂದು ಹೇಳಬಹುದಿತ್ತಲ್ಲಾ? ಈಗ ಮೈತ್ರಿ ಬಗ್ಗೆ ಹೈಕಮಾಂಡ್ ಕೇಳಬೇಕಿತ್ತು ಎಂದು ಯಾಕೆ ಹೇಳುತ್ತೀರಿ ಎಂದು ಪ್ರಶ್ನಿಸಿದರು.

Key words: former minister- V. Somanna – displeasure- MLA -Munirathna