ಹಿಂದೂಗಳು ಮಟನ್ ಅಂಗಡಿ ಇಟ್ಟರೇ ಹಣ ಸಹಾಯ- ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಘೋಷಣೆ.

ಬೆಂಗಳೂರು,ಮಾರ್ಚ್,30,2022(www.justkannada.in): ರಾಜ್ಯದಲ್ಲಿ  ಹಲಾಲ್  ಮಾಂಸವನ್ನು ಖರೀದಿಸಬೇಡಿ ಎಂದು ಹಿಂದೂಪರ ಸಂಘಟನೆಗಳು ಅಭಿಯಾನ ಆರಂಭಿಸಿದ್ದು ಈ ಬೆನ್ನಲ್ಲೆ ಇದೀಗ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ, ಹಿಂದೂಗಳು ಮಾಂಸದ ಅಂಗಡಿ ಇಟ್ಟರೆ ಹಣಕಾಸಿನ ಸಹಾಯ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಎಂ.ಪಿ ರೇಣುಕಾಚಾರ್ಯ, ನ್ಯಾಯಯುತವಾಗಿ ಬದುಕೋದಕ್ಕೆ ಚಪ್ಪಲಿ ಅಂಗಡಿ ಇಟ್ಟರು ತಪ್ಪೇನಿಲ್ಲ. ಹಲಾಲ್ ಅಂದ್ರೇ ಉಗುಳೋದು. ಉಗುಳುವುದು ನಿಮ್ಮ ಹಲಾಲಾ. ಕುರಾನ್ ನಲ್ಲಿ ಉಗುಳಿ ಅಂತಾ ಹೇಳಿದೆಯಾ.  ನೀವು ಕಟ್ ಮಾಡಿದ ಮಾಂಸವನ್ನ ಹಾಲಾಲ್ ಎಂದು ನಾವು ತಿನ್ನಬೇಕಾ..? ಈ ವಿವಾದ ಹುಟ್ಟಿ ಹಾಕಿದ್ದೇ ಮುಸ್ಲಿಮರು ಎಂದು ಕಿಡಿಕಾರಿದರು.  

ಮುಸ್ಲೀಂ ಅಂಗಡಿಗಳಲ್ಲಿ ಹಲಾಲ್ ಮಾಡಿದ   ಮಾಂಸ ಖರೀದಿಯನ್ನು ಹಿಂದೂಗಳು ನಿಲ್ಲಿಸಬೇಕು. ಇದು ಅವರ ಅಲ್ಲಾಗೆ ಅರ್ಪಿಸಿದ  ಮಾಂಸವಾಗಿದೆ. ಈ  ಎಂಜಲು ಮಾಂಸವನ್ನು ಖರೀದಿಸಿ ತಿನ್ನಬಾರದು ಎಂದು ಹಿಂದೂ ಜನಜಾಗೃತಿ ಸಮಿತಿ ಅಭಿಯಾನ ಆರಂಭಿಸಿದೆ.

Key words: Helping – Hindus – mutton shop-BJP MLA -MP Renukacharya