ಇನ್ಮುಂದೆ ಕಡ್ಡಾಯ ಹೆಲ್ಮೆಟ್ ಧಾರಣೆಗೆ ಕಠಿಣ ಕ್ರಮ- ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ.

Promotion

ಮೈಸೂರು,ನವೆಂಬರ್,6,2021(www.justkannada.in): ನಗರದಲ್ಲಿ ಇನ್ಮುಂದೆ ಕಡ್ಡಾಯ ಹೆಲ್ಮೆಟ್ ಧಾರಣೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹೆಲ್ಮೆಟ್ ಪರಿಶೀಲನೆಗೆ ವಿಶೇಷ ತಂಡ ರಚನೆ ಮಾಡಲಾಗುತ್ತದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದರು.

ಮೈಸೂರು ನಗರ ಪೊಲೀಸರಿಂದ ಸಂಚಾರ ಸುರಕ್ಷತಾ ಅಭಿಯಾನ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಹೆಲ್ಮೆಟ್ ಜಾಗೃತಿ ಕಾರ್ಯಕ್ರಮವನ್ನ ಪತ್ರಕರ್ತರ ಭವನದಲ್ಲಿ ಆಯೋಜಿಸಲಾಗಿತ್ತು. ಪತ್ರಕರ್ತರಿಗೆ ಹೆಲ್ಮೆಟ್ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ನಗರ ಪೊಲೀಸ್ ಅಯುಕ್ತ ಡಾ.ಚಂದ್ರಗುಪ್ತ ಚಾಲನೆ ನೀಡಿದರು.Traffic – Mysore-police-Siege - 300 vehicles

ಈ ವೇಳೆ ಮಾತನಾಡಿದ ಡಾ.ಚಂದ್ರಗುಪ್ತ ಅವರು, ಪ್ರತಿಯೊಬ್ಬರೂ ಕಡ್ಡಾಯವಾಗಿ ಹೆಲ್ಮೆಟ್ ಧರಸುವಂತೆ  ಮನವಿ ಮಾಡಿದರು. ಸಂಚಾರ ನಿಯಮ ಪಾಲಿಸಿದರೆ ಅಪಘಾತ ತಪ್ಪಿಸಬಹುದು. ಕೋವಿಡ್ ನಿಂದ ಕಠಿಣ ನಿಯಮಗಳನ್ನ ತರಲು ಸಾಧ್ಯವಾಗಲಿಲ್ಲ. ಇನ್ಮುಂದೆ  ಹೆಲ್ಮೆಟ್ ಕಡ್ಡಾಯಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಕೇವಲ ದಂಡ ಸಂಗ್ರಹ ನಮ್ಮ ಉದ್ದೇಶವಲ್ಲ, ಸಾರ್ವಜನಿಕರ ಸಂಚಾರ ನಿಯಮದ ಜಾಗೃತಿ ಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ಡಿಸಿಪಿ ಗೀತಾಪ್ರಸನ್ನ, ಟ್ರಾಫಿಕ್ ಎಸಿಪಿ ಗಂಗಾಧರ್ ಸ್ವಾಮಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಉಪಸ್ಥಿತರಿದ್ದರು.

Key words: Helmet –Awareness- Program-mysore-press club-Police Commissioner -Dr. Chandragupta.