ಮಣ್ಣು ಕುಸಿದ ಹಿನ್ನೆಲೆ: ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ…

Promotion

ಮಂಗಳೂರು,ಆ,11,2019(www.justkannada.in):  ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮಣ್ಣು ಕುಸಿದ ಹಿನ್ನೆಲೆ  ಶಿರಾಡಿ ಘಾಟಿ ರಸ್ತೆ ಆ.12ರ ತನಕ ಬಂದ್ ಮಾಡಲಾಗಿದೆ.

ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ  ಶಿರಾಡಿ ಘಾಟಿ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಶಿರಾಡಿ ಗ್ರಾಮದಿಂದ 26 ಕಿಮೀ ಮೇಲೆ ಕಾಂಕ್ರೀಟ್ ರಸ್ತೆ ಮುಗಿದ ನಂತರ ಎತ್ತಿನಹಳ್ಳ ಎಂಬ ಸ್ಥಳದಲ್ಲಿ ಹೆದ್ದಾರಿಗೆ ಗುಡ್ಡ ಕುಸಿದು ಬಿದ್ದಿದೆ. ಬೃಹತ್‌ ಪ್ರಮಾಣದಲ್ಲಿ ಮಣ್ಣು ರಸ್ತೆಗೆ ಬಿದ್ದಿದ್ದು, ಅದರೊಂದಿಗೆ ಮರಗಳು ಕೂಡಾ ರಸ್ತೆಗೆ ಬಿದ್ದಿವೆ. ಈ ಹಿನ್ನಲೆಯಲ್ಲಿ ಆ,12 ರ ತನಕ ಶಿರಾಡಿ ಘಾಟಿ ರಸ್ತೆ ಬಂದ್ ಮಾಡಲಾಗಿದೆ.

Key words: heavy rain-Traffic -ban – Shiradi Ghat -road