ರಾಜ್ಯ ಬಿಟ್ಟು ಏಕೆ ಕಳಿಸುತ್ತೀರಿ- ಲೋಕಸಭೆ ಚುನಾವಣೆ ಸ್ಪರ್ಧೆ ಕುರಿತು ಹೆಚ್.ಡಿಕೆ ಪ್ರತಿಕ್ರಿಯೆ..

Promotion

ಹಾಸನ, ಫೆಬ್ರವರಿ 12,2024(www.justkannada.in): ಲೋಕಸಭೆ ಚುನಾವಣೆಯಲ್ಲಿ ತಮ್ಮ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ರಾಜ್ಯ ಬಿಟ್ಟು ಏಕೆ ಕಳಿಸುತ್ತೀರಿ, ರಾಜ್ಯದಲ್ಲೇ ಇರೋಣ ಅಂದುಕೊಂಡಿದ್ದೇನೆ ಎನ್ನುವ ಮೂಲಕ ಲೋಕಸಮರದಲ್ಲಿ ಸ್ಪರ್ಧಿಸದ ಬಗ್ಗೆ ಸುಳಿವು ನೀಡಿದರು.

ಈ ಕುರಿತು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನಾನು ಯೋಚಿಸಿಲ್ಲ. ರಾಜ್ಯ ಬಿಟ್ಟು ಏಕೆ ಕಳಿಸುತ್ತೀರಿ, ರಾಜ್ಯದಲ್ಲೇ ಇರೋಣ ಅಂದುಕೊಂಡಿದ್ದೇನೆ. ಈ ಬಾರಿ ನೀವು ಸ್ಪರ್ಧಿಸಿದರೆ ಗೆದ್ದು ಕೇಂದ್ರದಲ್ಲಿ ಮಂತ್ರಿ ಆಗುತ್ತೀರಿ. ರಾಜ್ಯಕ್ಕೆ ಒಳ್ಳೆಯದಾಗುತ್ತೆ ನೀವು ಲೋಕಸಭೆ ಚುನಾವಣೆಗೆ ನಿಲ್ಲಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ತುಮಕೂರು, ಚಿಕ್ಕಬಳ್ಳಾಪುರ, ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದಲೂ ಸ್ಪರ್ಧಿಸಿ ಅಂತಿದ್ದಾರೆ. ಹಾಸನದಲ್ಲಿ ದೇವೇಗೌಡರು ನಿಲ್ಲದೆ ಇದ್ದರೆ ನೀವೇ ಬಂದುಬಿಡಿ ಅಂತಾರೆ. ಅಭಿಮಾನದಲ್ಲಿ ಮಾತನಾಡುತ್ತಾರೆ, ಎಲ್ಲಾ ಕಡೆ ನಾನೇ ನಿಲ್ಲಲು ಆಗುತ್ತಾ? ಏನೇನು ಮಾಡಬೇಕು ಅಂತಾ ಮುಂದೆ ನೋಡೋಣ. ಆದರೆ ನಾನು ಈ ಕ್ಷಣದವರೆಗೂ ಲೋಕಸಭೆಗೆ ಸ್ಪರ್ಧಿಸುವ ಬಗ್ಗೆ ತೀರ್ಮಾನಿಸಿಲ್ಲ ಎಂದು ಸ್ಪಷ್ಟಪಡಿಸಿದರು.

Key words:  HD Kumaraswamy-  response – Lok Sabha election- contest.