ಕುಸಿಯುತ್ತಿರುವ ನೀರಿನ ಮಟ್ಟ: ಬರಿದಾಗುತ್ತಿದೆ ಕಬಿನಿಯ ಒಡಲು..

ಮೈಸೂರು,ಜೂ, 20,2019(www.justkannada.in): ರಾಜ್ಯದಲ್ಲಿ ಮೊದಲು ತುಂಬುವ ಜಲಾಶಯ ಎಂಬ ಖ್ಯಾತಿಯಾಗಿರುವ  ಮೈಸೂರು ಜಿಲ್ಲೆ ಎಚ್.ಡಿ ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದ  ಒಡಲು ಬರಿದಾಗುತ್ತಿದ್ದು ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿದೆ.

ಜೂನ್ ಎರಡನೇ ವಾರ ಕಳೆದಿದ್ದರೂ ಕಬಿನಿ ಜಲಾಶಯದಲ್ಲಿ ಒಳಹರಿವು ಹೆಚ್ಚಾಗದೆ ಜಲಾಶಯದಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಕೇರಳಾದ ವೈನಾಡಿನಲ್ಲಿ ಮುಂಗಾರು ಚುರುಕಾಗದ ಹಿನ್ನೆಲೆ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಕಬಿನಿ ಜಲಾನಯನ ಪ್ರದೇಶದ ಸಾವಿರಾರು ಎಕರೆ ಕೃಷಿ ಭೂಮಿಗೆ ಡ್ಯಾಮ್ ಆಸರೆಯಾಗಿದ್ದು ಸುಮಾರು 19.5 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯವಿದೆ.

ಈ ನಡುವ ಸದ್ಯದಲ್ಲಿ ಕಬಿನಿ ಜಲಾಶಯದಲ್ಲಿ ಕೇವಲ 6 ಟಿಎಂಸಿ ನೀರು ಮಾತ್ರ ಶೇಖರಣೆಯಾಗಿದೆ. ಕಳೆದ ವರ್ಷ ಈ ವೇಳೆಗೆ  ನೀರಿನ ಮಟ್ಟ 2282.00 ಅಡಿ ದಾಟಿತ್ತು. ಪ್ರಸ್ತುತ ಕೇವಲ 2256.50ಅಡಿಗೆ ಇಳಿಕೆಯಾಗಿದೆ. ಕಬಿನಿ ಜಲಾಶಯ ಬೆಂಗಳೂರು ಮತ್ತು ಮೈಸೂರು ಮಹಾನಗರಗಳಿಗೆ ಕುಡಿಯುವ ನೀರು ಪೂರೈಸುವ ಮೂಲವಾಗಿದೆ. ಇನ್ನು ಜಲಾಶಯದ ಮಟ್ಟ ಇನ್ನು ಹೆಚ್ಚಾಗದ ಹಿನ್ನೆಲೆ ರೈತರಲ್ಲಿ ಆತಂಕ ಮನೆ ಮಾಡಿದ್ದು, ಮುಂದಿನ ದಿನಗಳಲ್ಲಿ ಮಳೆಯಾಗದಿದ್ದರೇ ನೀರಿಗೆ ಬರ ಉಂಟಾಗುವ ಸಾಧ್ಯತೆ ಬರಲಿದೆ.

Key words: hd kote-kabini dam- Declining -water level.