ಅಫಿಡೆವಿಟ್ ಸಲ್ಲಿಸುವ ವೇಳೆ ಸುಳ್ಳು ಮಾಹಿತಿ ಆರೋಪ: ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ವಾಗ್ದಾಳಿ ನಡೆಸಿದ ಮಾಜಿ ಸಚಿವ ಎ.ಮಂಜು..

ಬೆಂಗಳೂರು,ಜೂ,20,2019(www.justkannada.in):  ಲೋಕಸಭೆ ಚುನಾವಣೆಯಲ್ಲಿ ಅಫಿಡೆವಿಟ್ ಸಲ್ಲಿಸುವ ವೇಳೆ ಸಂಸದ ಪ್ರಜ್ವಲ್ ರೇವಣ್ಣ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಮಾಜಿ ಸಚಿವ ಎ. ಮಂಜು ಆರೋಪಿಸಿದರು.

ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ  ಬಿಜೆಪಿ ಮುಖಂಡ ಎ. ಮಂಜು, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಾಗ ಅಫಿಡವಿಟ್ ನೀಡಬೇಕು. ಅಫಿಡವಿಟ್ ನಲ್ಲಿ ಎಲ್ಲವನ್ನೂ ತಿಳಿಸಬೇಕು. ಶಿಕ್ಷಣ,ಸಾಲ,ಚರ ಸ್ಥಿರಾಸ್ತಿ ಬಗ್ಗೆ ತಿಳಿಸುವುದು ಧರ್ಮ. ಆದರೆ ಅದನ್ನ ಪ್ರಜ್ವಲ್ ರೇವಣ್ಣ ಬದಿಗೊತ್ತಿದ್ದಾರೆ. ಅಫಿಡೆವಿಟ್ ನಲ್ಲಿ ಮಿನರ್ವ ಬ್ಯಾಂಕ್, ಪಡುವಲಹಿಪ್ಪೆ ಕರ್ನಾಟಕ ಬ್ಯಾಂಕ್ ಬಗ್ಗೆ ತಿಳಿಸಿದ್ದಾರೆ. ಕರ್ನಾಟಕ ಬ್ಯಾಂಕ್ ನಲ್ಲಿ ಅವರ ಬ್ಯಾಂಕ್ ಬ್ಯಾಲೆನ್ಸ್ ೫ ,೭೮,೨೩೮ ತೋರಿಸಿದ್ದಾರೆ. ಆದರೆ ನಮ್ಮ ಪ್ರಕಾರ ೪೩,೩೧,೨೮೬  ರೂ.ಅಕೌಂಟ್ ನಲ್ಲಿದೆ. ೪೩ ಲಕ್ಷ ಬಿಟ್ಟು ಕೇವಲ ೫ ಲಕ್ಷ ತೋರಿಸಿದ್ದಾರೆ ಎಂದು ದೂರಿದ್ದಾರೆ.

ಚುನವಣೆಗೆ ಸ್ಪರ್ಧಿಸಿದರೆ 5 ವರ್ಷ ರಿಟರ್ನ್ಸ್ ತೋರಿಸಬೇಕು. ಆದರೆ ಕೇವಲ ಒಂದು ವರ್ಷ ಅದಾಯ ತೆರಿಗೆ ತೋರಿಸಿದ್ದಾರೆ. ಉಳಿದೆಲ್ಲವೂ ನಾಟ್ ಫೈಲ್ ಎಂದು ತೋರಿಸಿದ್ದಾರೆ. 2016 ರಲ್ಲಿಯೇ ಮಿನರ್ವ ಸರ್ಕಲ್ ನಲ್ಲಿ ಅಕೌಂಟ್ ಓಪನ್ ಮಾಡಿದ್ದಾರೆ. ಆಗಲೇ ಹಲವು ಕಡೆ ಭೂಮಿಯನ್ನೂ ಖರೀದಿಸಿದ್ದರು. ಹೀಗಿದ್ದರೂ ಎಲ್ಲವನ್ನೂ ಮರೆಮಾಚಿದ್ದಾರೆ. ಕೇವಲ ೧೮/೧೯ಎರಡು ವರ್ಷದ ತೆರಿಗೆ ತೋರಿಸಿದ್ದಾರೆ.  ಪ್ರಜ್ವಲ್ ಎರಡು ಕಂಪನಿಯ ಪಾಲುದಾರರು. ಶೇ ೨೫/೨೬ ರಷ್ಟು ಕಂಪನಿಯ ಪಾಲಿದೆ.. ಎಲ್ ಎಲ್ ಪಿ,ಡ್ರೋಣ್ ಎಂಬ ಕಂಪನಿಗಳಲ್ಲಿ ಪಾರ್ಟ್ನರ್ ಆಗಿದ್ದಾರೆ. ಆದರೆ ಇದೆಲ್ಲವನ್ನೂ ಅಫಿಡವಿಟ್ ನಲ್ಲಿ ತಿಳಿಸಿಲ್ಲ ಎಂದು ಎ.ಮಂಜು ಗಂಭೀರ ಆರೋಪ ಮಾಡಿದರು.

ಇನ್ನು ಹೊಳೆನರಸೀಪುರದಲ್ಲಿ ತಂದೆ,  ಗಿಫ್ಟ್ ವೊಂದನ್ನ ಕೊಟ್ಟಿದ್ದಾರೆ. ಸೂರಜ್, ಪ್ರಜ್ವಲ್ ಗೆ ಗಿಫ್ಟ್ ಕೊಟ್ಟಿದ್ದಾರೆ. ಆ ಗಿಫ್ಟ್ ನಿವೇಶನ ಅಂತ ಅಫಿಡವಿಟ್ ನಲ್ಲಿ ತೋರಿಸಿದ್ದಾರೆ. ಆದರೆ ವಾಸ್ತವವಾಗಿ ಅದು ಕನ್ವೆಂಶನ್ ಹಾಲ್. ಚೆನ್ನಾಂಬಿಕಾ ಕನ್ವೆಂಶನ್ ಹಾಲ್ ಅಂತ ಹೈವೈನಲ್ಲಿಯೇ ಇದೆ. ಹೈವೇಯಲ್ಲಿ ಕಟ್ಟಿರೋದ್ರಿಂದ ಸಾರ್ವಜನಿಕರಿಂದ ದೂರು ಕೂಡ ದಾಖಲಾಗಿತ್ತು. ಸುಮಾರು ಐದಾರು ಕೋಟಿಯ ಬೆಲೆಬಾಳುವ ಕನ್ವೆನ್ಶನ್ ಹಾಲ್ ಇದು. ಕೋರ್ಟ್ ಕೂಡ ಡೆಮಾಲಿಶನ್ ಗೆ ಆದೇಶಿಸಿತ್ತು. ಹೀಗಿದ್ದರೂ ಅಧಿಕಾರ ದುರುಪಯೋಗ ಮಾಡಿ ಇಲ್ಲಿಯವರೆಗೆ ಉಳಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಎಲ್ಲೂ ದೇವೇಗೌಡರು ಐಟಿಯವರ ಕಾಲು ಹಿಡಿದಿದ್ದಾರೆ ಅನ್ನಿಸುತ್ತೆ….

ಇನ್ನು ನೆಲಮಂಗಲದ ಬಳಿ 12 ಎಕರೆ ಭೂಮಿ ಖರೀದಿಸಿದ್ದಾರೆ. ಬಾವಿಕೆರೆ ಎಂಬಲ್ಲಿ ೧೨ ಎಕರೆ ಖರೀದಿಸಿದ್ದಾರೆ.ಆದರೆ ಮಾರ್ಕೆಟ್ ಬೆಲೆಯನ್ನ ನಮೂದಿಸಿಲ್ಲ.ಅಲ್ಲಿ ಎರಡೂವರೆ ಕೋಟಿ ಎಕರೆಗೆ ಬೆಲೆಯಿದೆ.ಆದರೆ ಕೇವಲ ೫೬ ಲಕ್ಷ ಮಾತ್ರ ತೋರಿಸಿದ್ದಾರೆ. ಬೇನಾಮಿ ಹೆಸರಿನಲ್ಲಿ ೪೫ ಎಕರೆಗೆ ಬೇಲಿ ಹಾಕಿದ್ದಾರೆ. ಸರ್ಕಾರಿ ಖರಾಬು ಭೂಮಿಯನ್ನೂ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ. ದಾಖಲೆ ಪ್ರಕಾರ ಪ್ರಜ್ವಲ್ ಖರೀದಿಸಿದ ಭೂಮಿ ಸರ್ವೆ ನಂಬರ್ ಸರ್ಕಾರಿ ಭೂಮಿ ಅಂತ ಈಗಲೂ ಇದೆ. ಆದ್ರೆ ಇವ್ರು ಖರೀದಿ ಮಾಡಿದ್ದೇವೆ ಅಂತ ತೋರಿಸುತ್ತಿದ್ದಾರೆ.ದಾಖಲೆಗಳನ್ನು ಮಾತ್ರ ಮುಚ್ಚಿಡುತ್ತಿದ್ದಾರೆ.. ಸುಳ್ಳು ದಾಖಲೆ‌ ಸೃಷ್ಟಿಸಿ ಭೂಮಿ ಖರೀದಿ ಮಾಡಿದ್ದಾರೆ. ಮಾಜಿ ಪ್ರಧಾನಿ ಮೊಮ್ಮಗ ಅಂತ ಸುಮ್ಮನೆ ಬಿಟ್ಟಿದ್ದೀರಾ  ಎಂದು ಪ್ರಶ್ನಿಸಿದರು. ಈ ಬಗ್ಗೆ ದಾಖಲೆ ಸಮೇತ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದೇವೆ. ಆದರೆ ಇಲ್ಲಿಯವರೆಗೆ ಐಟಿ ಇಲಾಖೆ ಕೂಡ ಗಮನಹರಿಸಿಲ್ಲ.ಎಲ್ಲೂ ದೇವೇಗೌಡರು ಐಟಿಯವರ ಕಾಲು ಹಿಡಿದಿದ್ದಾರೆ ಅನ್ನಿಸುತ್ತೆ ಎಂದು ಎ.ಮಂಜು ಲೇವಡಿ ಮಾಡಿದರು.

ಪ್ರಜ್ವಲ್ ಇನ್ನು ಮದುವೆಯಾಗಿಲ್ಲ. ಮದುವೆಯಾಗದೇನೆ ಈ ರೀತಿ ಭ್ರಷ್ಟಾಚಾರ ಮಾಡಿದ್ದಾನೆ. ಈವಾಗ ಸಂಸದ ಬೇರೆ ಆಗಿದ್ದಾರೆ. ಸಂಸದರಾಗದೇ ಈ ರೀತಿ ಭ್ರಷ್ಟಾಚಾರ ಮಾಡಿದವರು ಈಗ ಸಂಸದರಾಗಿ ಎಷ್ಟು ಭ್ರಷ್ಟಾಚಾರ ಮಾಡಬಹುದು ಎಂದು ಪ್ರಜ್ವಲ್ ರೇವಣ್ಣ ವಿರುದ್ದ ಕಿಡಿಕಾರಿದರು.

ನಾಳೆ ಹಾಸನ ಸಂಸದರಾಗಿ ಲೋಕಸಭೆಯಲ್ಲಿ ಪ್ರಜ್ವಲ್ ರೇವಣ್ಣ ಪ್ರಮಾಣ ವಚನ ತಗೆದುಕೊಳ್ಳಲಿದ್ದಾರೆ. ಪ್ರಜ್ವಲ್ ಗೆ ಸಂಸದರಾಗಿ ಪ್ರಮಾಣ ವಚನ ಭೋದನೆ ತಡೆಹಿಡಿಯಬೇಕು ಅಂತ ಕೋರಿ ಲೋಕಸಭೆ ಸ್ಪೀಕರ್ ಗೆ ಪತ್ರ ಬರೆಯಲು  ಎ.ಮಂಜು ಮುಂದಾಗಿದ್ದಾರೆ ಎನ್ನಲಾಗಿದೆ.

Key words: Accused -false information – affidavit-Former minister -A Manju,-against – Prajwal Rewanna.