ಹವಾಲ ದಂಧೆಯಲ್ಲಿ ತೊಡಗಿದ್ದ ಆರೋಪಿ ಅಂದರ್…

Promotion

ಬೆಂಗಳೂರು,ನವೆಂಬರ್,10,2020(www.justkannada.in):  ಹವಾಲ ದಂಧೆಯಲ್ಲಿ ತೊಡಗಿದ್ದ ಆರೋಪಿಯನ್ನ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.kannada-journalist-media-fourth-estate-under-loss

ಪಂಕಜ್ ಪಟೇಲ್ ಬಂಧಿತ ಆರೋಪಿ. ಆರೋಪಿ ಪಂಕಜ್ ಪಟೇಲ್ ಮನೆಯಲ್ಲಿ ಲಕ್ಷಾಂತರ ರೂ ಇಟ್ಟುಕೊಂಡಿದ್ದ. ಹವಾಲ ಮೂಲಕ ಹಣ ಬೇರೆಯವರಿಗೆ ವರ್ಗಾವಣೆ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕಬ್ಬನ್ ಪೇಟೆಯ ಪಂಕಜ್ ಪಟೇಲ್ ನಿವಾಸದ ಮೇಲೆ ದಾಳಿ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ.havala-scam-arrest-accused-bangalore-ccb-police

ಬಂಧಿತನ ಮನೆಯಲ್ಲಿದ್ಧ 28 ಲಕ್ಷರೂ ಹಣ ಮತ್ತು ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: havala scam- arrest-accused-bangalore-ccb-police