ಹೇಮಾವತಿ ಡ್ಯಾಂ ಕಟ್ಟಿಸಿದ್ದು ನಾನೇ: ಆದರೆ ಡ್ಯಾಂ ನೀರನ್ನು ಬಳಸಲು ನಮಗೆ ಅವಕಾಶ ನೀಡ್ತಿಲ್ಲ- ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ.

Promotion

ಹಾಸನ,ಮಾರ್ಚ್,18,2022(www.justkannada.in):  ಹೇಮಾವತಿ ಜಲಾಶಯವನ್ನು ಕಟ್ಟಿಸಿದ್ದು ನಾನೇ. ಆದರೇ   ಜಲಾಶಯದ ನೀರನ್ನು ಬಳಸಲು ನಮಗೆ ಅವಕಾಶ  ನೀಡುತ್ತಿಲ್ಲ ಎಂದು ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಅಸಮಾಧಾನ ಹೊರಹಾಕಿದರು.

ಹಾಸನದಲ್ಲಿ ಇಂದು ಮಾತನಾಡಿದ ಹೆಚ್.ಡಿ ದೇವೇಗೌಡರು,  ತಮಿಳುನಾಡಿನವರು ಜೀವ ಹಿಂಡುತ್ತಾರೆ, ಹೇಮಾವತಿ ನೀರು ಪಡೆಯಲು ಶಾಸಕ ರಾಮಸ್ವಾಮಿ ಹೋರಾಡುತ್ತಿದ್ದಾರೆ. ಸಂಸತ್‌ ನಲ್ಲಿ ನಾನು ಮಾತನಾಡಲು ಯತ್ನಿಸಿದೆ. ಆದರೆ ತಮಿಳುನಾಡಿನ ಎಲ್ಲಾ ಪಕ್ಷಗಳ ಸಂಸದರು ಒಂದಾದರು. ಆದರೆ ರಾಜ್ಯದಿಂದ ನಾನು ಒಬ್ಬನೇ ಆದೆ, ನಮ್ಮದು ಮೂರು ಪಕ್ಷ, ಮೂರು ಗುಂಪು. ಜಲ ವಿವಾದದ ಬಗ್ಗೆ ನಮ್ಮ ರಾಜ್ಯದ ನಾಯಕರು ಒಂದಾಗಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಾವು ಯಾವತ್ತು ಅಧಿಕಾರಕ್ಕೆ ರಾಜಕೀಯ ಮಾಡಿಲ್ಲ. ತಾತ್ವಿಕ ವಿಚಾರಕ್ಕೆ ರಾಜಕೀಯ ಮಾಡಿದ್ದೀವಿ. ದೈವದ ಆಟ ನೋಡಿ ಒಬ್ಬ ಮಗ ಹಾಸನ, ಇನ್ನೊಬ್ಬ ಮಗ ರಾಮನಗರ. ಅಣ್ಣ ತಮ್ಮ ಯಾವತ್ತಾದರೂ ಜಗಳ ಆಡ್ತಾರಾ ಅಂದ್ರೆ ಇಲ್ಲವೇ ಇಲ್ಲಾ. ಕುಮಾರಸ್ವಾಮಿ ಫಿಲಂ ಪ್ರಡ್ಯೂಸರ್ ಆಗಿದ್ದರು, ಆ ಭಾಗದ ಜನ ಎಳೆದುಕೊಂಡು ಬಂದರು. ಸೋತಿರಬಹುದು ಗೆದ್ದಿರಬಹುದು, ಆದರೆ ಜನರಿಗಾಗಿ ಕೆಲಸ ಮಾಡಿದ್ದಾರೆ ಎಂದು ಹೆಚ್ ಡಿ ದೇವೇಗೌಡರು ನುಡಿದರು.

Key words: Hassan-former PM-HD Devegowda