ಸೆಲ್ಫಿ ತೆಗೆಯಲುಹೋಗಿ ಮೂಕನಮನೆ ಫಾಲ್ಸ್ ನಲ್ಲಿ ಬಿದ್ದು ಸಾವನ್ನಪ್ಪಿದ ಯುವಕ

Promotion

ಹಾಸನ: ಜೂ-23:(www.justkannada.in) ಅದೆಷ್ಟೇ ದುರ್ಘಟನೆಗಳು ನಡೆಯುತ್ತಿದ್ದರೂ ಅಪಾಯಕಾರಿ ಸ್ಥಳಗಳಲ್ಲಿ ನಿಂತು ಸೆಲ್ಫಿ ತೆಗೆಯುವ ಹುಚ್ಚು ಮಾತ್ರ ಯುವಜನತೆಯಲ್ಲಿ ಕಡಿಮೆಯಾಗುತ್ತಿಲ್ಲ. ಇದೇ ಸೆಲ್ಫಿ ಕ್ರೇಜಿಗೆ ಈಗ ಮತ್ತೊರ್ವ ಯುವಕ ಬಲಿಯಾಗಿದ್ದಾನೆ.

ಸ್ನೇಹಿತರ ಜತೆ ಸಕಲೇಶಪುರಕ್ಕೆ ಪ್ರವಾಸ ತೆರಳಿದ್ದ ಯುವಕನೊಬ್ಬ ಸೆಲ್ಫಿ ತೆಗೆಯುತ್ತಾ ಮೂಕನ ಮನೆ ಫಾಲ್ಸ್​​ನಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರು ಮೂಲದ ತನುಷ್​​​ (25) ಮೃತ ಯುವಕ.

ಬೆಂಗಳೂರಿನ ತಿಗಳರ ಪಾಳ್ಯದ ತನುಷ್​​​​​ ಹಾಗೂ ಪುರುಷೋತ್ತಮ್​​​​​ ವೀಕೆಂಡ್ ಹಿನ್ನಲೆಯಲ್ಲಿ ಬೈಕ್​​ನಲ್ಲಿ ಪ್ರವಾಸ ತೆರಳಿದ್ದರು. ಮಡಿಕೇರಿಯಲ್ಲಿ ಪ್ರವಾಸ ಮುಗಿಸಿ ಮೂಕನ ಮನೆ ಫಾಲ್ಸ್​​​​​ ನೋಡಲು ಬಂದಿದ್ದರು. ಈ ವೇಳೆ ಈಜಲು ಫಾಲ್ಸ್​ಗೆ ಇಳಿದಿದ್ದಾರೆ. ಮೃತ ತನುಷ್​​​​​​​​ ಬಂಡೆಯಿಂದ ಹರಿಯುತ್ತಿದ್ದ ನೀರನ ಜತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಆಯಾ ತಪ್ಪಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಯಳಸೂರು ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆಲ್ಫಿ ತೆಗೆಯಲುಹೋಗಿ ಮೂಕನಮನೆ ಫಾಲ್ಸ್ ನಲ್ಲಿ ಬಿದ್ದು ಸಾವನ್ನಪ್ಪಿದ ಯುವಕ
Hasana, man dead,selfi,Mukana mane falls