ವೃತ್ತಿಪರ ಗಾಯಕರನ್ನೂ ನಾಚಿಸುವಂತೆ ಹಾಡಿದ ಹಳ್ಳಿಹಕ್ಕಿ ಹೆಚ್.ವಿಶ್ವನಾಥ್…

ಮೈಸೂರು,ಜು,28,2020(www.justkannada.in):  ಸದಾ ರಾಜಕೀಯ ಜಂಜಾಟದಲ್ಲಿ ಮುಳುಗಿ ಆರೋಪ ಪ್ರತ್ಯಾರೋಪ, ಟೀಕೆ ಟಿಪ್ಪಣಿಗಳನ್ನೇ ವಾದ-ಪ್ರತಿವಾದಗಳನ್ನೇ ನೋಡುತ್ತಿದ್ದ  ಹಳ್ಳಿಹಕ್ಕಿ ಹೆಚ್.ವಿಶ್ವನಾಥ್  ಇಂದು ಕಾರ್ಯಕ್ರಮವೊಂದರಲ್ಲಿ ಗಾಯಕರಾಗಿ ವೃತ್ತಿಪರ ಗಾಯಕರನ್ನೂ ನಾಚಿಸುವಂತೆ ಹಾಡಿದರು.jk-logo-justkannada-logo

ಹೌದು, ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಹೆಚ್.ವಿಶ್ವನಾಥ್ ಗಾಯಕರಾಗಿ ಹಾಡಿದರು. ಸಂವಾದಕ್ಕೂ ಮೊದಲೇ ಸಂವಾದ ಕೇವಲ ಸಾಹಿತ್ಯಿಕವಾಗಿರಲಿ ಅದರಲ್ಲಿ ರಾಜಕೀಯ ಬೆರೆಸುವುದು ಬೇಡವೆಂದು  ಹೆಚ್. ವಿಶ್ವನಾಥ್ ಮನವಿ ಮಾಡಿದರು.

ನಂತರ ತಮ್ಮ ಹುಟ್ಟು, ಬಾಲ್ಯ, ಮೈಸೂರಿನ ವಿದ್ಯಾಭ್ಯಾಸ ದಿನಗಳನ್ನು ನೆನೆದ ವಿಶ್ವನಾಥ್, ಬಳಿಕ ನಿಧಾನವಾಗಿ ರಾಜಕೀಯದತ್ತ ಹೊರಳಿ, ತಮ್ಮ ರಾಜಕೀಯ ಜೀವನದಲ್ಲಿ ನಿರ್ವಹಿಸಿದ ಖಾತೆಗಳು, ಅಂದಿನ ಘಟನೆಗಳನ್ನು ಮೆಲುಕು ಹಾಕಿದರು. ತಮ್ಮ ಆತ್ಮಕಥನವಾದ ಹಳ್ಳಿಹಕ್ಕಿ ಹಾಡು ಪುಸ್ತಕದ ಕುರಿತು, ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ನಡೆದ ವಿವಾದಗಳ ಕುರಿತು ಮನಬಿಚ್ಚಿ ಮಾತನಾಡಿದರು.h-vishwanath-song-mysore-press-club

ಇದಾದ ನಂತರ ಡಾ.ಸಿಪಿಕೆಯವರ ಕೋರಿಕೆಯಂತೆ  ಹೆಚ್.ವಿಶ್ವನಾಥ್ ಕುವೆಂಪುರವರ ದೂರಕೆ ದೂರಕೆ ಬಹುದೂರಕೆ ಎಂಬ ಗೀತೆಯನ್ನ  ವೃತ್ತಿಪರ ಗಾಯಕರನ್ನೂ ನಾಚಿಸುವಂತೆ ಹಾಡಿದರು.

Key words: H.Vishwanath-song- mysore- press club