ಹೆಚ್.ವಿಶ್ವನಾಥ್‌ ರಾಜಕೀಯ ದುರಂತ ಅಂತ್ಯ- ಮಾಜಿ ಸಚಿವ ಸಾ.ರಾ ಮಹೇಶ್ ಲೇವಡಿ…

Promotion

ಮೈಸೂರು,ಜೂ,20,2020(www.justkannada.in): ಹೆಚ್.ವಿಶ್ವನಾಥ್‌ ರಾಜಕೀಯ ದುರಂತ ಅಂತ್ಯ ಕಂಡಿದ್ದಾರೆ. ರಾಜಕೀಯದಲ್ಲಿ ಮತದಾರರಿಗೆ, ನಾಯಕರಿಗೆ, ಕ್ಷೇತ್ರದ ಜನರಿಗೆ ದ್ರೋಹ ಮಾಡಿದ್ರೆ ಹೀಗೆ ಆಗೋದು‌ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಲೇವಡಿ ಮಾಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಸಾ.ರಾ ಮಹೇಶ್, ರಾಜಕಾರಣಿಗೆ ಪ್ರಾಮಾಣಿಕತೆ ಇಲ್ಲ ಅಂದ್ರೆ ಏನಾಗುತ್ತೆ ಅನ್ನೋದಕ್ಕೆ ಇವರೇ ಉದಾಹರಣೆ. ಇನ್ನು ಅವರಿಗೆ ಬಾಕಿ ಇರೋದು ಜಿಲ್ಲಾಪಂಚಾಯಿತ್ ಹಾಗೂ ಗ್ರಾಮ ಪಂಚಾಯತ್ ಚುನಾವಣೆ ಮಾತ್ರ. ಜಿಲ್ಲೆಯ ಎಲ್ಲ ಪಕ್ಷ ರಾಜಕಾರಣಿಗಳಿಗೆ ಇವರ ಸ್ಥಿತಿ ಸ್ಪಷ್ಟ ಉದಾಹರಣೆ. ಜೆಡಿಎಸ್ ನಾಯಕರು ಕಾರ್ಯಕರ್ತರು ನೀಡಿದ ಭಿಕ್ಷೆಯಿಂದ ಅವರು ಎರಡು ವರ್ಷ ಚಲಾವಣೆಯಲ್ಲಿದ್ದರು. ಕುಮಾರಸ್ವಾಮಿ ಬಗ್ಗೆ ಮಾತನಾಡುವ ನೈತಿಕತೆ ನಿಮಗೆ ಇಲ್ಲ‌ ಎಂದು ವಾಗ್ದಾಳಿ ನಡೆಸಿದರು.h-vishwanath-political-tragedy-former-minister-sara-mahesh-mysore

ಮೈಸೂರು ಮೈಮುಲ್ ಅಕ್ರಮ ನೇಮಕಾತಿ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಾ.ರಾ ಮಹೇಶ್,  ಇಡೀ ಪ್ರಕ್ರಿಯೆಗೆ ಹೈ ಕೋರ್ಟ್‌ ತಡೆ ನೀಡಿದೆ. ಹೈಕೋರ್ಟ್ ನೇಮಕಾತಿ ಪ್ರಕ್ರಿಯೆಗೆ 3 ವಾರಗಳ ನಿಷೇಧ ಹೇರಿದೆ. ಇದರಿಂದಾಗಿ ಮೈಮುಲ್ ಎಲ್ಲಾ ಪ್ರಕ್ರಿಯೆಗೆ ತಡೆ ಬಿದ್ದಿದೆ. ಕೊನೆಗೂ ನಮ್ಮ ಮನವಿಯನ್ನ ನ್ಯಾಯಾಲಯ ಪುರಸ್ಕರಿಸಿದೆ ಎಂದರು.

ರಾಜ್ಯ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು‌. ಪಾರದಾರ್ಶಕವಾಗಿ ಹುದ್ದೆಗಳ ಆಯ್ಕೆ ಪ್ರಕ್ರಿಯೆ ನಡೆಸಬೇಕು. ನ್ಯಾಯಯುತವಾಗಿ ನೇಮಕಾತಿ ನಡೆಯಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕ್ರಮ ಕೈಗೊಳ್ಳಬೇಕು. ಹಣವನ್ನ ಅಡ್ವಾನ್ಸ್ ಮಾಡಿದವರು ಬಡ್ಡಿ ಸಮೇತ ವಾಪಸ್ ಪಡೆದುಕೊಳ್ಳಿ. ಹಣ ಕಳೆದುಕೊಂಡವರ ಜೊತೆ ನಾವು ಇದ್ದೇ ಇರ್ತಿವಿ‌ ಎಂದು ಶಾಸಕ ಸಾ. ರಾ. ಮಹೇಶ್ ತಿಳಿಸಿದರು.

Key words: H.Vishwanath – political –tragedy-Former minister –sara Mahesh -mysore