ಹೆಚ್,ವಿಶ್ವನಾಥ್ ಮಾಡಿರುವ ಫೋನ್ ಕದ್ಧಾಲಿಕೆ ಆರೋಪಕ್ಕೆ ತಿರುಗೇಟು: ಸರಳ ದಸರಾ ಆಚರಣೆಗೆ ಶಾಸಕ ತನ್ವೀರ್ ಸೇಠ್ ವಿರೋಧ….

Promotion

ಮೈಸೂರು,ಆ,15, 2019(www.justkannada.in):  ಹಿಂದಿನ ಸರ್ಕಾರದ ಅವಧಿಯಲ್ಲಿ ಫೋನ್ ಕದ್ಧಾಲಿಕೆ ಆಗಿದೆ. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಫೋನ್ ಕದ್ಧಾಲಿಕೆ ಮಾಡಿಸಿದ್ದಾರೆ ಎಂದು  ಆರೋಪಿಸಿದ್ದ ಅನರ್ಹ ಶಾಸಕ ಹೆಚ್. ವಿಶ್ವನಾಥ್ ಗೆ ಶಾಸಕ ತನ್ವೀರ್ ಸೇಠ್ ತಿರುಗೇಟು ನೀಡಿದ್ದಾರೆ.

ನಮ್ಮ‌ ಸರ್ಕಾರದಲ್ಲಿ ಫೋನ್‌ ಕದ್ದಾಲಿಕೆ ಆಗಿಲ್ಲ. ಒಂದು ವೇಳೆ ಫೋನ್ ಕದ್ದಾಲಿಕೆ ಆಗಿದ್ರೆ ಸಮಗ್ರ ತನಿಖೆ ಆಗಲಿ. ವಿಶ್ವನಾಥ್ ಹೇಳುವ ಮಾತು ಸತ್ಯವಾಗಿದ್ರೆ ಸಿಬಿಐ ತನಿಖೆ ಮಾಡಲಿ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್  ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಶಾಸಕ‌ ತನ್ವೀರ್ ಸೇಠ್, ಫೋನ್ ಕದ್ದಾಲಿಕೆ ಸರ್ಕಾರದಲ್ಲಿ ಅವಕಾಶ ಇದೆ. ದೇಶದ, ರಾಜ್ಯದ ಭದ್ರತೆಗಾಗಿ ಫೋನ್ ಕದ್ದಾಲಿಕೆ ಮಾಡಬಹುದು. ಆದರೆ‌ ಜನಪ್ರತಿನಿಧಿಗಳ ಫೋನ್ ಕದ್ದಾಲಿಕೆ ಮಾಡೋದು ತಪ್ಪು. ವಿಶ್ವನಾಥ್ ಹೇಳುವ ಮಾತು ಸತ್ಯವಾಗಿದ್ರೆ ಸಿಬಿಐ ತನಿಖೆ ಮಾಡಿಸಲಿ ಎಂದು ತನ್ವೀರ್ ಸೇಠ್ ಆಗ್ರಹಿಸಿದರು.

ಸರಳ ದಸರಾ ಆಚರಣೆಗೆ ವಿರೋಧ…

ರಾಜ್ಯದಲ್ಲಿ ಪ್ರವಾಹ ಅತಿವೃಷ್ಠಿ ಹಿನ್ನೆಲೆ ಸರಳ ದಸರಾ ಆಚರಣೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನಡೆಗೆ  ಶಾಸಕ ತನ್ವೀರ್ ಸೇಠ್ ವಿರೋಧ‌ ವ್ಯಕ್ತಪಡಿಸಿದ್ದಾರೆ. ಸರಳ ದಸರಾದಿಂದ ಪ್ರವಾಸೋಧ್ಯಮಕ್ಕೆ ಹೊಡೆತ ಬಿಳುತ್ತದೆ. ಅದಕ್ಕಾಗಿ ಸರಳ ದಸರಾ ಬದಲು ಅದ್ದೂರಿ ಸದರಾ ಮಾಡಲಿ ಎಂದು ರಾಜ್ಯ ಸರ್ಕಾರಕ್ಕೆ ಶಾಸಕ ತನ್ವೀರ್ ಸೇಠ್ ಒತ್ತಾಯ ಮಾಡಿದ್ದಾರೆ.

ಕಷ್ಟದಲ್ಲೆ‌ ಜನರು ದೇವರ ಹತ್ತಿರ ಹೋಗೋದು. ಈಗ ರಾಜ್ಯದ ಜನತೆ  ಕಷ್ಟದಲ್ಲಿ  ಇದ್ದಾರೆ..ದಸರಾವನ್ನ ಸರಳವಾಗಿ ಮಾಡಿದರೆ ತಾಯಿ ಚಾಮುಂಡೇಶ್ವರಿಗೆ ಅವಮಾನ ಮಾಡಿದಂತೆ. ರಾಜ್ಯದ ಕಷ್ಟವನ್ನ ನಿಗಿಸಲು ಚಾಮುಂಡೇಶ್ವರಿಯನ್ನ ಪೂಜಿಸಬೇಕು. ಅದಕ್ಕಾಗಿ ಅದ್ದೂರಿ  ದಸರಾ ಆಚರಣೆ ಮಾಡಬೇಕು ಎಂದು ತನ್ವೀರ್ ಸೇಠ್ ತಿಳಿಸಿದರು.

Key words: H. Vishwanath- phone tapping-accusation- MLA Tanveer Saith- opposes- simple Dasara