ಸರ್ಕಾರದ ಜೊತೆಗೆ ಹೆಚ್.ಡಿ.ಕುಮಾರಸ್ವಾಮಿ ಡೀಲ್ ಮಾಡ್ಕೊಂಡಿದ್ದಾರೆ : ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ಆರೋಪ

Promotion

ಬೆಂಗಳೂರು,ಡಿಸೆಂಬರ್,09,2020(www.justkannada.in) : ಕುಮಾರಸ್ವಾಮಿ ಅವರ ಶಾಸಕರನ್ನೇ ಮಾರಾಟ ಮಾಡಿದ್ದಾರೆ. ಡೀಲ್ ಮಾಡೋದ್ರಲ್ಲಿ ನಿಸ್ಸೀಮರು. ಸರ್ಕಾರದ ಜೊತೆಗೆ ಹೆಚ್.ಡಿ.ಕುಮಾರಸ್ವಾಮಿ ಡೀಲ್ ಮಾಡ್ಕೊಂಡಿದ್ದಾರೆ ಎಂದು ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು. logo-justkannada-mysore

ವಿಧಾನಸೌಧ ಮುತ್ತಿಗೆ ಪ್ರತಿಭಟನೆ ಚಳುವಳಿ ನಡೆಸುವ ಸಂದರ್ಭ ಮಾಜಿ ಸಿಎಂ ಎಚ್.ಡಿ.ಕೆ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗೆ ಜೆಡಿಎಸ್ ಬೆಂಬಲ ವಿಚಾರವಾಗಿ ಮಾತನಾಡಿದ ಅವರು, ಕುಮಾರಸ್ವಾಮಿಯವರನ್ನು ರೈತರು ಮಣ್ಣಿನ ಮಗ ಅಂತಾರೆ. ಆದ್ರೇ ರೈತರ ಬಾಯಿಗೆ ಕುಮಾರಸ್ವಾಮಿ ಮಣ್ಣು ಹಾಕೋ ಕೆಲಸ ಮಾಡಿದ್ರು ಎಂದು ಆಕ್ರೋಶವ್ಯಕ್ತಪಡಿಸಿದರು.

ಅವರಿಗೆ ರೈತರ ಪರ ಕಾಳಜಿಯೇ ಇಲ್ಲ. ಕುಮಾರಸ್ವಾಮಿ ಮಣ್ಣಿನ ಮಕ್ಕಳ ದ್ರೋಹಿ. ಅವರದ್ದು ಏನಿದ್ದರೂ ಪುಟಗೋಸಿ ರಾಜಕಾರಣ ಎಂಬುದಾಗಿ ವಾಗ್ದಾಳಿ ನಡೆಸಿದರು.

H.D.Kumaraswamy-along-Govt-Deal-modded-Charges-peasant-fighter-Kodihalli Chandrasekhar

key words : H.D.Kumaraswamy-along-Govt-Deal-modded-Charges-peasant-fighter-Kodihalli Chandrasekhar