ಹೆಚ್.ಡಿಡಿ ಕುಟುಂಬ ಇರುವುದು ರಾಜಕಾರಣ , ಹಣ ಲೂಟಿ ಮಾಡುವುದಕ್ಕಾಗಿ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕೆ.

Promotion

ಗದಗ,ಜನವರಿ,2,2022(www.justkannada.in): ಬಿಜೆಪಿ ತಮ್ಮ ಗುಂಡಿ ತಾನೇ ತೋಡಿಕೊಳ್ಳುತ್ತಿದೆ ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗದಗದಲ್ಲಿ ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,  ಯಾರ ಗುಂಡಿ ಯಾರು ತೋಡಿಕೊಂಡಿದ್ದಾರೆ ಎಂದು ಗೊತ್ತಾಗುತ್ತದೆ. ಇಡೀ ದೇಶ ಮತ್ತು ರಾಜ್ಯದಲ್ಲಿ ಗೊತ್ತಾಗಿದೆ. ಹೆಚ್. ಡಿ ದೇವೇಗೌಡರ ಕುಟುಂಬ ಇರುವುದು ರಾಜಕಾರಣ ಹಣ ಲೂಟಿ ಮಾಡಲು . ಇಡೀ ಕುಟುಂಬವೇ ರಾಜಕೀಯಕ್ಕೆ ಧುಮುಕಿದೆ. ನಾನು ರಾಜಕೀಯಕ್ಕೆ  ಬಂದು 25 ವರ್ಷಗಳಾಗಿದೆ.  ನಾನು ಪ್ರಧಾನಿ ಮೋದಿ ಅವರ ಆದರ್ಶ ಪಾಲಿಸುತ್ತೇನೆ. ನನ್ನ ಕುಟುಂಬವನ್ನ ರಾಜಕೀಯಕ್ಕೆ ತಂದಿಲ್ಲ. ತರುವುದು ಇಲ್ಲ. ಖಡಾಖಂಡಿತವಾಗಿ ಹೇಳುತ್ತೇನೆ. ನೀವು ಹೀಗೆ ಹೇಳ್ತೀರಾ…? ಎಂದು ಹೆಚ್.ಡಿಡಿ ಕುಟುಂಬಕ್ಕೆ ಪ್ರಶ್ನಿಸಿದರು.

ಹೆಚ್. ಡಿ ದೇವೇಗೌಡರು ಹಿರಿಯರು. ಅವರ ಬಗ್ಗೆ ನಾನು ಏನು ಹೇಳುವುದಿಲ್ಲ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.

Key words:  H.D Devegowda- family – politics – looting- money-Union Minister -Prahlad Joshi